ಬಂಟ್ವಾಳ: ಸಹಸ್ರಾರು ಸಂಖ್ಯೆಯ ಜಾತಿ ವ್ಯವಸ್ಥೆಗೆ ಒಗ್ಗಿಕೊಂಡಿರುವ ಭಾರತದಲ್ಲಿ ಶಿಕ್ಷಣದ ಜೊತೆಗೆ ಇಚ್ಛಾಶಕ್ತಿ ಮತ್ತು ಸಾಧನಾ ಮನೋಭಾವ ಹೊಂದಿರುವ ಕಟ್ಟ ಕಡೆಯ ಸಾಮಾನ್ಯ ವ್ಯಕ್ತಿ ಕೂಡಾ ದೇಶದಲ್ಲಿ ಸಂವಿಧಾನಶಿಲ್ಪಿಯಾಗಿ ರೂಪುಗೊಂಡು ಜಗತ್ತಿನಲ್ಲಿ ಎತ್ತರಕ್ಕೆ ಬೆಳೆದು ನಿಲ್ಲುವ ಮೂಲಕ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರು ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಹೇಳಿದ್ದಾರೆ.
ತಾಲ್ಲೂಕಿನ ರಾಯಿ ಗ್ರಾಮದ ಪಡ್ರಾಯಿ ಪರಿಶಿಷ್ಟ ಕಾಲೊನಿಯಲ್ಲಿ ಕ್ಷೇತ್ರ ಬಿಜೆಪಿ ಘಟಕ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ 125ನೇ ಜನ್ಮದಿನಾಚರಣೆ ಪ್ರಯುಕ್ತ ಸೋಮವಾರ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ ತಾಲ್ಲೂಕಿನಾದ್ಯಂತ ಪ್ರತೀ ತಿಂಗಳು ದಲಿತ ಕಾಲೊನಿಗೆ ಭೇಟಿ ನೀಡಿ ಅಂಬೇಡ್ಕರ್ ಜನ್ಮ ದಿನಾಚರಣೆ ಸಹಿತ ಸ್ವಚ್ಛತಾ ಅಭಿಯಾನ ಮತ್ತು ಸಂವಾದ ಕಾರ್ಯಕ್ರಮ ನಡೆಸುವುದಾಗಿ ತಿಳಿಸಿದರು.
ರಾಜ್ಯ ಬಿಜೆಪಿ ಸಹ ವಕ್ತಾರೆ ಸುಲೋಚನಾ ಜಿ.ಕೆ.ಭಟ್ ಮಾತನಾಡಿ, ಇಂತಹ ಅಭಿಯಾನಕ್ಕೆ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಪ್ರೇರಣಾಶಕ್ತಿಯಾಗಿದ್ದಾರೆ ಎಂದರು. ಪರಿಶಿಷ್ಟ ಮೋಚರ್ಾ ಅಧ್ಯಕ್ಷ ಗಂಗಾಧರ, ಕಾರ್ಯದಶರ್ಿ ಗಣೇಶ ಪಚ್ಚಿನಡ್ಕ, ಎಪಿಎಂಸಿ ಅಭ್ಯಥರ್ಿ ವಸಂತ ಕುಮಾರ್ ಅಣ್ಣಳಿಕೆ, ಹಿಂದುಳಿದ ವರ್ಗ ಮೋಚರ್ಾ ಕಾರ್ಯದಶರ್ಿ ಸಂತೋಷ್ ಕುಮಾರ್ ಬೆಟ್ಟು, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಪರಮೆಶ್ವರ ಪೂಜಾರಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಹರೀಶ ಆಚಾರ್ಯ, ಇಂದಿರಾ ಮಧುಕರ ಬಂಗೇರ, ಸದಸ್ಯ ಪದ್ಮನಾಭ ಗೌಡ, ಮುದ್ದಾಜೆ ವಸಂತ ಗೌಡ, ಶಂಕರ ಪಡ್ರಾಯಿ ಮತ್ತಿತರರು ಇದ್ದರು.
ಕ್ಷೇತ್ರ ಬಿಜೆಪಿ ಕಾರ್ಯದರ್ಶಿ ರಮಾನಾಥ ರಾಯಿ ಸ್ವಾಗತಿಸಿ, ವಂದಿಸಿದರು.ಇದೇ ವೇಳೆ ಇಲ್ಲಿನ ಕಾಲೊನಿ ರಸ್ತೆಯಲ್ಲಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ 50ಕ್ಕೂ ಮಿಕ್ಕಿ ಮಂದಿ ಸ್ಥಳೀಯರು ಪಾಲ್ಗೊಂಡರು.
Be the first to comment on "ಶ್ರೇಷ್ಠ ಸಾಧನೆಗೆ ಅಂಬೇಡ್ಕರ್ ಮಾದರಿ"