ವಿಟ್ಲ: ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಶಾಸನತಂತ್ರದ ಅಂಗವಾದ “ಗ್ರಾಮೋದಯ”ದ ಮುಳಿಯ ಶಾಲೆಯ ಆವರಣದಲ್ಲಿ ಮಾಹಿತಿ ಸಭೆ ನಡೆಯಿತು.
ದಿಗ್ದರ್ಶಕರಾದ ಡಿ. ಡಿ ಶರ್ಮ ಗೋಕರ್ಣ, ಗೌರವ ಸಲಹೆಗಾರರಾದ ಎಲ್.ಎನ್ ಕುಡೂರ್, ನಿರ್ದೇಶಕರಾದ ದಿವಾಣ ಗೋವಿಂದ ಭಟ್ ಮಾಹಿತಿ ನೀಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಸಂಘಟನೆ ಮನೋಜ್, ಈಶ್ವರ್ ಅವರಿಂದ ವಿಶೇಷ ಸಲಹೆಗಳನ್ನು ಪಡೆಯಲಾಯಿತು. ವಿಟ್ಲದ ಬಲಿಪಗುಳಿಯ ಉದ್ಯಮಿ ರಾಜಾರಾಂ ಭಟ್ ಸಲಹೆಗಳನ್ನು ನೀಡಿದರು.
ಮಂಗಳೂರು ಮಂಡಲ ಅಧ್ಯಕ್ಷ ಸೇರಾಜೆ ಸುಬ್ರಹ್ಮಣ್ಯ ಭಟ್, ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ ಮತ್ತಿತರರು ಉಪಸ್ಥಿತರಿದ್ದರು.
ಗ್ರಾಮೋದಯ ಸಹ ಕಾರ್ಯದರ್ಶಿ ವಿದ್ಯಾಲಕ್ಷ್ಮಿ ಕೈಲಂಕಜೆ ಸ್ವಾಗತಿಸಿದರು. ಕೇಪು ವಲಯದ ಅಧ್ಯಕ್ಷ ಅಮೈ ಜನಾರ್ದನ ಭಟ್ ವಂದಿಸಿದರು.
Be the first to comment on "ಮುಳಿಯ ಶಾಲೆಯಲ್ಲಿ ಗ್ರಾಮೋದಯ ಮಾಹಿತಿ ಸಭೆ"