ಸಾಲೆತ್ತೂರು: ಜಮಾಅತ್ತ್ ಗಲ್ಫ್ ಕೋಪರೇಶನ್ ಕೌನ್ಸಿಲ್ (S.J.G.C.C) ಸಂಘಟನೆಯು ಜಮಾಅತ್ತಿನ ಅಭಿವೃದ್ದಿಗೆ ಬೇಕಾಗಿ ರೂಪುಗೊಂಡ ಸಂಘಟನೆ. ಈ ಸಂಘಟನೆ ಜಮಾಅತ್ತಿಗೆ ಒಳಪಟ್ಟ ವಿದೇಶದಲ್ಲಿ ದುಡಿಯುವ ಜನರನ್ನು ಒಳಗೊಂಡಿದೆ. ಮಸೀದಿಗೆ ಬೇಕಾಗಿದ ವ್ಯವಸ್ಥೆಯನ್ನು ಮಾಡಲು ತುದಿಗಾಲಲ್ಲಿ ನಿಂತು ಸಹಕರಿಸಲು ಸದಸ್ಯರು ಸನ್ನದ್ದರಾಗಿದ್ದಾರೆ. ಇದೇ ರೀತಿ ಮುಂದಕ್ಕೆ ಈ ಸಂಘಟನೆಯು ಜಮಾಅತ್ತಿನ ಮೂಲಭೂತ ಸೌಕರ್ಯ್ಯವನ್ನು ಒದಗಿಸಲು ಆರ್ಥಿಕವಾಗಿ ನೆರವನ್ನು ನೀಡಲು ತೀರ್ಮಾನಿಸಲಾಗಿದೆ. ಸಂಘಟನೆಯ ನೂತನ ಪಧಾಧಿಕಾರಿಗಳನ್ನಾಗಿ ಎಲ್ಲಾ ಸದಸ್ಯರ ಸರ್ವ ಸಮ್ಮತದಿಂದ ಆಯ್ಕೆ ಮಾಡಲಾಗಿದೆ.
ಸಾಲೆತ್ತೂರು ಜಮಾಅತ್ತ್ ಗಲ್ಫ್ ಕೋಪರೇಷನ್ ಕೌನ್ಸಿಲ್ ಇದರ ಗೌರವಾಧ್ಯಕ್ಷರಾಗಿ ಎ.ಕೆ ಅದ್ದುರ್ರಹಿಮಾನ್ ಕುವೈಟ್, ಅಧ್ಯಕ್ಷರಾಗಿ ಅಬೂಸ್ವಾಲಿಹ್ ಅಲ್ ಫಾಲಿಳಿ ಪೈಝೀ ಕತ್ತಾರ್, ಉಪಾಧ್ಯಕ್ಷರಾಗಿ ರಪೀಕ್ ಎ.ಕೆ ಸೌಧಿ ಅರೇಬಿಯಾ, ಪ್ರಧಾನ ಕಾರ್ಯದರ್ಶೀಯಾಗಿ ದಾವೂದ್ ಕಾಡುಮಠ, ಕಾರ್ಯದರ್ಶಿಯಾಗಿ ಶಾಫೀ ಕಟ್ಟೆ ಸೌದಿ ಅರೇಬಿಯಾ ಹಾಗೂ ಬಶೀರ್ ಕೊಲ್ನಾಡು, ಟ್ರೆಸರರ್ ಆಗಿ ಸುಲೈಮಾನ್ ಸಾಲೆತ್ತೂರ್ ಕಟ್ಟೆ, ಸಂಘಟನೆಯ ಮೇಲ್ನೊಟವನ್ನು ಬಶೀರ್ ಅಗರಿ ವಹಿಸಿದರು.
ಇದರ ಗ್ರಾಪಿಕ್ಸ್ ಡಿಸೈನರ್ ಆಗಿ ಕರಾರ್ ಎ.ಕೆ ಸೌಧಿ ಅರೇಬಿಯಾ ಮತ್ತು ಎ.ಕೆ ಅಸ್ರಫ್ ಸೌಧಿ ಅರೇಬಿಯಾ ವಿನ್ಯಾಸಗೊಳಿಸಿದರು. ಅದೇ ರೀತಿ ಉಳಿದ ಸದಸ್ಯರನ್ನು ಉನ್ನತ ಸದಸ್ಯರು ಎಂಬ ನಿಟ್ಟಿನಲ್ಲಿ ಸಮಾನ ರೀತಿಯಲ್ಲಿ ಆಯ್ಕೆ ಮಾಡಲಾಯತು.
Be the first to comment on "ಸಾಲೆತ್ತೂರು ಜಮಾಅತ್ತ್ ಗಲ್ಫ್ ಕೋಪರೇಷನ್ ಕೌನ್ಸಿಲ್ ಪದಾಧಿಕಾರಿಗಳ ಆಯ್ಕೆ"