ಬಂಟ್ವಾಳ: ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳಿಗೆ ಆಧಾರ ಸಂಖ್ಯೆ ಅಗತ್ಯವಿದ್ದು ಬಾಕಿಯಿರುವ ಫಲಾನುಭವಿಗಳು 25ರ ಒಳಗಾಗಿ ತನ್ನ ಆಧಾರ್ ಸಂಖ್ಯೆಯನ್ನು ಸಂಬಂಧಪಟ್ಟ ಗ್ರಾಮ ಕರಣಿಕರಲ್ಲಿ ನೀಡುವಂತೆ ಬಂಟ್ವಾಳ ತಾಲೂಕು ತಹಶೀಲ್ದಾರರ ಪ್ರಕಟನೆ ತಿಳಿಸಿದೆ.
ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆಯಡಿ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳಿಗೆ ಆಧಾರ್ ಸಂಖ್ಯೆ ಜೋಡನೆ ಹಾಗೂ ದತ್ತಾಂಶ ಶುದ್ದೀಕರಣ ಕಾರ್ಯ ಮುಂದಿನ ನವೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕಾಗಿದೆ. ಇಲ್ಲವಾದರೆ ಕೇಂದ್ರ ಸರಕಾರದಿಂದ ಬಿಡುಗಡೆಯಾಗುವ ಅನುದಾನ ಪಡೆಯಲು ತೊಂದರೆಯಾಗಲಿದೆ. ಪಿಂಚಣಿ ವಿತರಣೆಯಲ್ಲೂ ವ್ಯತಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಫಲಾನುಭವಿಗಳು ತಕ್ಷಣ ತಮ್ಮ ಆಧಾರ್ ಸಂಖ್ಯೆಯನ್ನು ಗ್ರಾಮ ಕರಣಿಕರಲ್ಲಿ ನೀಡುವಂತೆ ಅವರು ಕೋರಿದ್ದಾರೆ.
Be the first to comment on "ಪಿಂಚಣಿ ಫಲಾನುಭವಿಗಳಿಗೆ ಆಧಾರ ಸಂಖ್ಯೆ ಅಗತ್ಯ"