ವಿಟ್ಲ: ಅಪಾಯ…ನೀವೀಗ ಕಲ್ಲಡ್ಕ – ಕಾಂಞಂಗಾಡು ಹೆದ್ದಾರಿಯಲ್ಲಿದ್ದೀರಿ!
ಶೀರ್ಷಿಕೆ ನೋಡಿ ಹುಬ್ಬೇರಿಸಬೇಡಿ. ಈ ಮಾರ್ಗ ನೋಡಲು ಅಂದವಾಗಿದ್ದರೂ ಅಷ್ಟೇ ಅಪಾಯಕಾರಿ.
ರಸ್ತೆ ಬದಿಯಲ್ಲಿ ಡಾಂಬರಿನಿಂದ ಕೆಳಗಿಳಿಸಿದರೆ ಅಪಾಯ, ರಸ್ತೆ ಬದಿ ತಡೆಗೋಡೆ ಇಲ್ಲದೆ ಅಪಾಯ, ಮಳೆಗಾಲ ಬಂದಾಗ ಮಣ್ಣು ಸಡಿಲವಾಗಿ ಕುಸಿತಕ್ಕೊಳಗಾದರೆ ಅಪಾಯ, ಚರಂಡಿಗಳಲ್ಲಿ ಮಣ್ಣು ತುಂಬಿದರೆ ಅಪಾಯ…. ಹೀಗೆ ಅಪಾಯಗಳ ಸರಮಾಲೆಯನ್ನೇ ನೋಡಬೇಕಾದರೆ ಈ ರಸ್ತೆಯಲ್ಲಿ ಸಂಚರಿಸಿ.
ಅಧಿಕ ಬಾರ ಹೇರಿಕೊಂಡು ಹೋಗುವ ಘನ ಲಾರಿಗಳ ಸಂಚಾರದಿಂದ ರಸ್ತೆ ಕುಸಿತ ಭೀತಿ ಉಂಟಾಗುತ್ತಿದೆ ಎಂಬ ಕೂಗು ಇಂದು ನಿನ್ನೆಯದಲ್ಲ. ರಸ್ತೆಯ ಬದಿ ಕುಸಿತವಾದಲ್ಲಿಗೆ ತಡೆಗೋಡೆಗಳ ನಿರ್ಮಾಣವಾಗದ ಹಿನ್ನಲೆಯಲ್ಲಿ ಅಪಾಯವನ್ನು ಆಹ್ವಾನಿಸುತ್ತಿದೆ.
ಕಲ್ಲಡ್ಕ- ಕಾಂಞಂಗಾಡು ಹೆದ್ದಾರಿಯ ಗೋಳ್ತಮಜಲು, ಮಜಿಓಣಿ, ಕಾಶಿಮಠ ತಿರುವು, ಉಕ್ಕುಡ ದರ್ಬೆ, ಕೇಪು, ಮರಕ್ಕಿಣಿ, ಸಾರಡ್ಕ ಚೆಕ್ ಪೋಸ್ಟ್ ಮೊದಲು ಹಾಗೂ ಸಾರಡ್ಕ ಗಡಿ ಸಮೀಪ ರಸ್ತೆಯ ಮೇಲ್ಬಾಗ ಉತ್ತಮವಾಗಿ ಕಾಣಿಸಿದರೂ ಬದಿಯಲ್ಲಿ ಅಪಾಯ ಸದಾ ಆಹ್ವಾನಿಸುತ್ತಿದೆ. ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರು ವೇಗಕ್ಕೆ ಮಿತಿ ಹಾಕಿ ಎಚ್ಚರದಿಂದ ಹೋಗದಿದ್ದಲ್ಲಿ ಅಪಾಯ ನಿಶ್ವಿತ.
Be the first to comment on "ಅಪಾಯ…ನೀವೀಗ ಕಲ್ಲಡ್ಕ – ಕಾಂಞಂಗಾಡು ಹೆದ್ದಾರಿಯಲ್ಲಿದ್ದೀರಿ!"