ಬಂಟ್ವಾಳ: ದೇಶದಾದ್ಯಂತ 500 ರೂ.ಮತ್ತು 1000 ರೂ.ಮುಖಬೆಲೆಯ ನೋಟುಗಳ ಚಲಾವಣೆ ನಿಷೇಧಗೊಂಡ ಹಿನ್ನಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ವ್ಯವಹಾರಗಳು ಬುಧವಾರ ಅಸ್ತವ್ಯಸ್ತಗೊಂಡವು.
ಮಂಗಳವಾರ ರಾತ್ರಿ ಈ ಸುದ್ದಿ ಹರಡಿದ ಕೂಡಲೇ ಈ ನೋಟುಗಳನ್ನು ಸ್ವೀಕರಿಸಲು ವ್ಯಾಪಾರಸ್ಥರು ಹಿಂದೇಟು ಹಾಕಿದರೆ ವಿಷಯ ತಿಳಿಯದ ಜನರು ಚಿಲ್ಲರೆ ನೋಟಿಗಾಗಿ ಪರದಾಡುವಂತಾಯಿತು. ಬುಧವಾರ ಬೆಳಗ್ಗೆ ಜನರು ಹಾಲಿನಿಂದ ಹಿಡಿದು ಇತರ ವ್ಯವಹಾರಗಳಿಗೆ 500 ರೂ.ಮತ್ತು1 ಸಾವಿರ ರೂ.ನೋಟುಗಳನ್ನು ತಂದರೆ ಯಾರೂ ಸ್ವೀಕರಿಸಲಿಲ್ಲ. ಚಿಲ್ಲರೆ ಕೊರತೆಯಿಂದಾಗಿ ಆಟೋ ರಿಕ್ಷಾ ಚಾಲಕರೂ ತೊಂದೆ ಪಡುವಂತಾಯಿತು.
ಸಹಕಾರಿ ಸಂಘಗಳ ಸಹಿತ ಬ್ಯಾಂಕ್ ವ್ಯವಹಾರ ಇಲ್ಲದಿದುದರಿಂದ ಗ್ರಾಮೀಣ ಪ್ರದೇಶದಲ್ಲಿ ಗ್ರಾಹಕರು ವಾಪಾಸು ಹೋಗುವಂತಾಯಿತು. ಗ್ರಾಹಕರಿಗೆ ನೋಟಿನ ಬಗ್ಗೆ ಮಾಹಿತಿ ನೀಡಬೇಕಾಯಿತು.
ನೋಟು ನಿಷೇಧಿಸಿ ವಹಿವಾಟು ಸ್ಥಗಿತಹೊಳಿಸಿದ ಹಿನ್ನಲೆಯಲ್ಲಿ ವಿಟ್ಲ ಪೇಟೆ ಅಂಗಡಿ ವಹಿವಾಟುಗಳು ಅರ್ಧಕ್ಕೆ ಇಳಿದಿತ್ತು.
ರಾಷ್ಟ್ರೀಕೃತ ಬ್ಯಾಂಕ್ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾದರೂ ಮುಖ್ಯದ್ವಾರದಲ್ಲಿ ಬ್ಯಾಂಕ್ ವ್ಯವಹಾರ ಇರುವುದಿಲ್ಲ ಎಂಬ ಫಲಕ ಕಾಣಿಸುತ್ತಿತ್ತು. ಸಹಕಾರಿ ಸಂಸ್ಥೆಗಳು ಚೆಕ್ ಸೇರಿ ಬೇರೆ ವ್ಯವಹಾರಗಳನ್ನು ಮುಂದುವರಿಸಿದ್ದರು. ಎಟಿಎಂ ಗಳು ಮುಚ್ಚಿದ್ದುದರಿಂದ ಹಲವರು ಸಮಸ್ಯೆಗೆ ಒಳಗಾಗಬೇಕಾಯಿತು. ಪೆಂಟ್ರೋಲ್ ಪಂಪ್ ಗಳಲ್ಲಿ ನಿತ್ಯಕ್ಕಿಂತ ಅಧಿಕವಾಹನಗಳು ಆಗಮಿಸಿ ಚಿಲ್ಲರೆ ಪಡೆದುಕೊಳ್ಳಲು ಯತ್ನಿಸುತ್ತಿದ್ದರು.
Be the first to comment on "500, 1000 ರೂ ನೋಟು ನಿಷೇಧ: ಮೊದಲ ದಿನ ಗ್ರಾಹಕರ ಪರದಾಟ"