ವಿಟ್ಲ: ಒಗ್ಗಟ್ಟು, ಪ್ರಾಮಾಣಿಕತೆ, ಸತ್ಯಸಂಧತೆಯ ವ್ಯವಹಾರದಿಂದ ಉತ್ತಮ ಫಲ ದೊರಕುತ್ತದೆ ಎಂದು ವಿಟ್ಲ ಅರಮನೆಯ ವಿ.ಜನಾರ್ದನ ವರ್ಮ ಅರಸರು ಹೇಳಿದರು.
ಗುರುವಾರ ಕಾಶಿಮಠ ಪ್ರಿಯಾ ಕಂಪೌಂಡ್‌ನಲ್ಲಿ ವಿಟ್ಲ ವಲಯ ಶಾಮಿಯಾನ ಮಾಲಕರ ಸಂಘದ ಉದ್ಘಾಟನೆ ನಡೆಸಿ ಮಾತನಾಡಿದರು.

ವಿಟ್ಲ ವಲಯ ಶಾಮಿಯಾನ ಮಾಲಕರ ಸಂಘವನ್ನು ವಿಟ್ಲ ಅರಮನೆಯ ವಿ.ಜನಾರ್ದನ ವರ್ಮ ಅರಸರು ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಬಾಬು ಕೆ.ವಿ. ಮಾತನಾಡಿ ಕೆಲಸ ಕಾರ್ಯದಲ್ಲಿ ತಾಳ್ಮೆ ಇದ್ದಾಗ ಯಶಸ್ವಿ ನಿಭಾಯಿಸಲು ಸಾಧ್ಯ ಎಂದು ತಿಳಿಸಿದರು.
ಸಂಘವು ವಿಟ್ಲದ ಸುತ್ತಮುತ್ತಲಿನ ಅಂದರೆ ವಿಟ್ಲ, ಉಕ್ಕುಡ, ಪುಣಚ, ಅಡ್ಯನಡ್ಕ, ಮುಳಿಯ, ಮಿತ್ತನಡ್ಕ, ಕನ್ಯಾನ, ಆನೆಕಲ್ಲು, ಕುಡ್ತಮುಗೇರು, ಸಾಲೆತ್ತೂರು, ಬಾಕ್ರಬೈಲು, ಮಂಚಿ, ಬೋಳಂತೂರು, ಬೊಳ್ಳಾಯಿ, ಕುಕ್ಕಾಜೆ, ಸಜಿಪ, ಮಂಗಳಪದವು, ಕಲ್ಲಡ್ಕ, ಮೆಲ್ಕಾರ್, ನಂದಾವರ, ಶಂಭೂರು, ಮಾಣಿ, ಕಂಬಳಬೆಟ್ಟು, ಕುಂಡಡ್ಕ, ಬುಡೋಳಿ, ಗಡಿಯಾರ, ಮುಡಿಪು, ಸೂರಿಕುಮೇರು ವ್ಯಾಪ್ತಿಯ ಶಾಮಿಯಾನ ಮಾಲಕರನ್ನೊಳಗೊಂಡಿದೆ.
ಗ್ರಾಹಕರ ಪರವಾಗಿ ಡಿ.ಬಿ.ಅಬೂಬಕ್ಕರ್, ಶ್ರೀನಿವಾಸ್ ಪೂಜಾರಿ ಮಾತನಾಡಿದರು.
ವಿಟ್ಲ ವರ್ತಕರ ಸಂಘದ ಅಧ್ಯಕ್ಷ ಎಚ್.ಜಗನ್ನಾಥ ಸಾಲ್ಯಾನ್, ಮಂಗಳೂರು ಕರಾವಳಿ ಟೆಂಟ್ ವರ್ಕ್ಸ್‌ನ ಅಬ್ದುಲ್‌ರಶೀದ್ ಡಿ.ಎಂ., ಮಂಗಳೂರು ಫಳ್‌ನೀರ್ ಎಂ.ಎಸ್.ವಿ.ಶಾಮಿಯಾನ ವರ್ಕ್ಸ್‌ನ ಅಬ್ದುಲ್‌ಲತೀಫ್, ಹೊಗೆ ಬಜಾರ್‌ನ ಪೂನಿಯಾ ಟೆಂಟ್ ಮತ್ತು ಕ್ಲಾತ್ ಕಂಪೆನಿಯ ರಾಜೇಶ್ ಕುಮಾರ್ ಪೂನಿಯಾ, ವಿಟ್ಲ ಧ್ವನಿ ಬೆಳಕು ಸಂಯೋಜಕರ ಒಕ್ಕೂಟದ ಅಧ್ಯಕ್ಷ ರವಿ ವರ್ಮ, ಕೆ.ಅಬೂಬಕ್ಕರ್, ವಿಟ್ಲ ವಲಯ ಶಾಮಿಯಾನ ಮಾಲಕರ ಸಂಘದ ಗೌರವ ಸಲಹೆಗಾರ ಅಲೆಕ್ಸಾಂಡರ್ ಲಸ್ರಾದೋ ಉಪಸ್ಥಿತರಿದ್ದರು.
ಸಂಘದ ಕೋಶಾಧಿಕಾರಿ ಡಿ.ಸಂಜೀವ ಪೂಜಾರಿ ಸ್ವಾಗತಿಸಿದರು. ಪದ್ಮನಾಭ ಶೆಟ್ಟಿ ವಂದಿಸಿದರು. ಇಸ್ಮಾಯಿಲ್ ಮೇಗಿನಪೇಟೆ ಕಾರ್ಯಕ್ರಮ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ಚಂದ್ರಹಾಸ ಸುವರ್ಣ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಪಿ., ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ಕುಂಡಡ್ಕ, ಜತೆಕಾರ್ಯದರ್ಶಿ ಫಯಾಝ್ ವಿಟ್ಲ, ಆನಂದ ಅಡ್ಯನಡ್ಕ ಸಹಕರಿಸಿದರು.
Be the first to comment on "ಪ್ರಾಮಾಣಿಕತೆ, ಸತ್ಯಸಂಧತೆಯ ವ್ಯವಹಾರದಿಂದ ಉತ್ತಮ ಫಲ"