ವಿಟ್ಲ: ವಿಟ್ಲ ಅಬೀರಿ ಅತಿಕಾರಬಲು ಯುವ ಕೇಸರಿ ಆಶ್ರಯದಲ್ಲಿ ವೀರಯೋಧರ ಸವಿನೆನಪಿಗಾಗಿ ಪುಷ್ಪಾರ್ಚನೆಯ ಗೌರವ, ದೀಪಾವಳಿ ಪ್ರಯುಕ್ತ 2ನೇ ವರ್ಷದ ಸಾರ್ವಜನಿಕ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಮತ್ತು ಹಗ್ಗಜಗ್ಗಾಟ ಹಾಗೂ ಸಮ್ಮಾನ ಕಾರ್ಯಕ್ರಮ ಚಂದಳಿಕೆ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಅಮ್ಮು ಶೆಟ್ಟಿ ಬೆಂಞಂತಿಮಾರುಗುತ್ತು ಉದ್ಘಾಟಿಸಿದರು.
ವಿಟ್ಲ ಪ.ಪಂ.ಅಧ್ಯಕ್ಷ ಅರುಣ ಎಂ.ವಿಟ್ಲ ಅವರು ಅಧ್ಯಕ್ಷತೆ ವಹಿಸಿದ್ದರು. ಭಾರತ್ ಶಾಮಿಯಾನ ಮಾಲಕ ಸಂಜೀವ ಪೂಜಾರಿ, ಪ.ಪಂ.ಸದಸ್ಯ ಮಂಜುನಾಥ ಕಲ್ಲಕಟ್ಟ, ವಿಟ್ಲ ಶ್ರೀ ಅನಂತೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಕಾರ್ತಿಕ್ ಭಟ್, ಉದ್ಯಮಿ ರೋಶನ್ ರೈ ಬನ್ನೂರು-ಪುತ್ತೂರು, ಚಂದಳಿಕೆ ಬೀಡಿ ಕಾಂಟ್ರಾಕ್ಟರ್ ದೇಜಪ್ಪ ಪೂಜಾರಿ ನಿಡ್ಯ, ಚಂದಳಿಕೆ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಭವಾನಿ ರೈ ಕೊಲ್ಯ, ಮುಡಿಪು ಸರಕಾರಿ ಹಿ.ಪ್ರಾ.ಶಾಲೆ ದೈಹಿಕ ಶಿಕ್ಷಕ ವಿಠಲ ನಾಯಕ್, ಚಂದಳಿಕೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚೆನ್ನಪ್ಪ ಪೂಜಾರಿ, ವಿಟ್ಲ ಸುಮುಖ ಜ್ಯುವೆಲ್ಲರ್‍ಸ್ ರವೀಂದ್ರ ಆಚಾರ್ಯ, ಚಂದಳಿಕೆ ವಿಶ್ವ ಹಿಂದೂ ಪರಿಷದ್ ಅಧ್ಯಕ್ಷ ಕೃಷ್ಣ ಮುದೂರು, ಯುವಕೇಸರಿ ಗೌರವಾಧ್ಯಕ್ಷ ವಿಠಲ ಪೂಜಾರಿ ಅತಿಕಾರಬಲು, ಅಧ್ಯಕ್ಷ ಚಂದ್ರಹಾಸ ಅಬೀರಿ, ಗೌರವ ಸಲಹೆಗಾರ ಈಶ್ವರ ಬಂಗೇರ ಅಬೀರಿ, ಕಾರ್ಯದರ್ಶಿ ಶಶಿಧರ ಕೇಪುಳಗುಡ್ಡೆ ಭಾಗವಹಿಸಿದ್ದರು.
ಯುವಕೇಸರಿ ಸಂಚಾಲಕ ಸುಶಾಂತ್ ಸಾಲಿಯಾನ್ ಚಂದಳಿಕೆ ಸ್ವಾಗತಿಸಿದರು. ಸಂಚಾಲಕ ದಿವಾಕರ ಶೆಟ್ಟಿ ಅಬೀರಿ ವಂದಿಸಿದರು. ಗಂಗಾಧರ್ ಸಿ.ಎಚ್.ಚಂದಳಿಕೆ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ, ಹಗ್ಗಜಗ್ಗಾಟ"