೦೧.೧೧.೨೦೧೬ ರಂದು ಕರ್ನಾಟಕ ಪ್ರೌಢ ಶಾಲೆ ಮಾಣಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದ ಮುಖ್ಯೋಪಾಧ್ಯಾಯರಾದ ಶ್ರೀ ಬಿ.ಕೆ ಭಂಡಾರಿಯವರು ಅಖಂಡ ಕರ್ನಾಟಕ ಸ್ಥಾಪನೆ, ಕನ್ನಡ ಭಾಷಾಭಿಮಾನವನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.

೦೧.೧೧.೨೦೧೬ ರಂದು ಕರ್ನಾಟಕ ಪ್ರೌಢ ಶಾಲೆ ಮಾಣಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು
ಮುಖ್ಯ ಅತಿಥಿಗಳಾದ ಶ್ರೀ ಎಂ.ಕೆ ಬಾಲಕೃಷ್ಣ ಭಟ್ ರವರು ಯುವಕರು ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಹಾಗೂ ಕನ್ನಡ ಕೃತಿಗಳನ್ನು ರಚಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು.
ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶಿರಂಕಲ್ಲು ಕೃಷ್ಣಭಟ್ , ಚೆನ್ನಪ್ಪ ಗೌಡ, ಗಂಗಾಧರ ರೈ, ಐ. ಜಯಲಕ್ಷ್ಮೀ, ಶ್ರೀಮತಿ ರಶ್ಮೀ , ನಿಶ್ಚಿತಾ , ಗಂಗಾಧರ ಗೌಡ ಹಾಗೂ ಶಾಲಾ ಸಿಬ್ಬಂದಿ ವರ್ಗದ ಅಭಿಲಾಷ್ ಕುಮಾರ್ ಜಿ, ಕೃಷ್ಣಪ್ಪ ನಾಯ್ಕ, ತಿಮ್ಮಪ್ಪ ಉಪಸ್ಥಿತರಿದ್ದರು.
ಶಿಕ್ಷಕಿ ಶ್ಯಾಮಲಾ ಕೆ ಸ್ವಾಗತಿಸಿದರು, ಶಿಕ್ಷಕ ಜಯರಾಮ .ಕೆ ಕಾರ್ಯಕ್ರಮ ಸಂಘಟಿಸಿದರು. ವಿದ್ಯಾರ್ಥಿನಿಯಾದ ಸಾಕ್ಷಾ ರೈ ವಂದಿಸಿದರು , ಆಯಿಷತ್ ಹಿಬಾ ಹಾಗೂ ಸಾನಿಯ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಕರ್ನಾಟಕ ಪ್ರೌಢ ಶಾಲೆ ಮಾಣಿಯಲ್ಲಿ ಕನ್ನಡ ರಾಜ್ಯೋತ್ಸವ"