ಬಂಟ್ವಾಳ

ಆಸರೆ ದಶಸಂಭ್ರಮ ಸನ್ಮಾನಕ್ಕೆ ಕೃಷಿ ಸಾಧಕಿ ರೀಟಾ ಮಿನೇಜಸ್ ಆಯ್ಕೆ

ಆಸರೆ ಗೆಳೆಯರ ಬಳಗ ಮಂಗಳೂರು ಸಂಸ್ಥೆಯ ದಶಮಾನೋತ್ಸವ ಅಂಗವಾಗಿ ‘ಆಸರೆ ದಶ ಸಂಭ್ರಮ 2027’ ಕಾರ್ಯಕ್ರಮ ಜನವರಿ 26ರಂದು ಮಂಗಳೂರಿನ ಮಲ್ಲಿಕಟ್ಟೆಯ ಜುಗುಲ್ ಹಾಲ್‌ನಲ್ಲಿ ಆಯೋಜಿಸಲಾಗಿದೆ.  ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರದ ಸಾಧನೆಗಾಗಿ ಸಿದ್ಧಕಟ್ಟೆಯ ಪ್ರಗತಿಪರ ಕೃಷಿಕ ಮಹಿಳೆ ರೀಟಾ ಮರಿಯಾ ಮಿನೆಜಸ್ ಅವರಿಗೆ ಆಸರೆ ಕೃಷಿ ರತ್ನ ಗೌರವ–2027 ನೀಡಿ ಸನ್ಮಾನಿಸಲಾಗುವುದು. ಕೃಷಿ, ಹೈನುಗಾರಿಕೆ ಹಾಗೂ ಸಮಾಜ ಸೇವೆಯಲ್ಲಿ ರೀಟಾ ಮರಿಯಾ ಮಿನೇಜಸ್ ಗಮನ ಸೆಳೆದಿದ್ದಾರೆ.

ಕೃಷಿ, ಹೈನುಗಾರಿಕೆ ಹಾಗೂ ಸಮಾಜ ಸೇವೆಯಲ್ಲಿ ತಮ್ಮದೇ ಆದ ವಿಶಿಷ್ಟ ಗುರುತು ಮೂಡಿಸಿರುವ ಸಾಧಕಿ ರೀಟಾ ಮರಿಯಾ ಮಿನೇಜಸ್ ಅವರು ಇಂದಿನ ಮಹಿಳೆಯರಿಗೆ ಮಾತ್ರವಲ್ಲದೆ ಪುರುಷರಿಗೂ ಮಾದರಿಯಾಗಿದ್ದಾರೆ.ಬ್ರಹ್ಮವರದ ಆರೂರಿನಲ್ಲಿ ಸಲ್ವಡಾರ್ ಡಿ’ಸೋಜಾ ಹಾಗೂ ಪ್ರಸಿಲ್ಲಾ ದಂಪತಿಯ ಪುತ್ರಿ ರೀಟಾ ಮರಿಯಾ ಅವರು, ಕೃಷಿಕ ಕುಟುಂಬದಿಂದ ಬಂದವರು. ಶಾಲಾ ದಿನಗಳಲ್ಲಿಯೇ ತಂದೆ-ತಾಯಿಯೊಂದಿಗೆ ಕೃಷಿ, ಹೈನುಗಾರಿಕೆ ಮತ್ತು ತರಕಾರಿ ಬೆಳೆಯುವ ಕಾರ್ಯಗಳಲ್ಲಿ ಆಸಕ್ತಿ ವಹಿಸಿದ್ದರು.

2004ರಲ್ಲಿ ಜೋಕಿಂ ಮಿನೇಜಸ್ ಎಲ್ವೆಸ್ ಅವರೊಂದಿಗೆ ವಿವಾಹವಾದರು.ಸಿದ್ಧಕಟ್ಟೆ ಚರ್ಚಿನ ಪವಿತ್ರ ಹೃದಯ ವಾಲಿಯ ಗುರಿಕಾರರಾಗಿ 5 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಕಥೋಲಿಕ್ ಸಭಾ ಸಿದ್ಧಕಟ್ಟೆ ಘಟಕದ ಅಧ್ಯಕ್ಷರಾಗಿ 2 ವರ್ಷ ಸೇವೆ ಸಲ್ಲಿಸುವುದರೊಂದಿಗೆ, ಸ್ತ್ರೀ ಸಂಘಟನೆಯಲ್ಲಿ ಮತ್ತು ಸ್ವ ಸಹಾಯ ಸಂಘಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಿದ್ಧಕಟ್ಟೆ ಹಾಲಿನ ಡೈರಿಯಲ್ಲಿ ಇವರ ಕೃಷಿ ಹಾಗೂ ಹೈನುಗಾರಿಕೆ ಚಟುವಟಿಕೆಗಳನ್ನು ಗುರುತಿಸಿ ‘ಓರ್ವ ಸಾಧಕಿ’ಯಾಗಿ ಸನ್ಮಾನಿಸಲಾಗಿದೆ. ಅಲ್ಲದೆ, ವಿವಿಧ ಸಂಘ-ಸಂಸ್ಥೆಗಳೂ ಸಹ ಇವರನ್ನು ಗೌರವಿಸಿವೆ.

ಜಾಹೀರಾತು
VNR GOLD
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.