ಕಲ್ಲಡ್ಕದ ಶ್ರೀ ಶಾರದಾ ಸೇವಾ ಪ್ರತಿಷ್ಠಾನ ವತಿಯಿಂದ 49ನೇ ವರ್ಷದ ಶಾರದೋತ್ಸವ ನಾಲ್ಕು ದಿನಗಳ ಕಾಲ ನಡೆಯಿತು. ಮಂಗಳವಾರ ಸಂಜೆ ಕಲ್ಲಡ್ಕ ರಾಜರಸ್ತೆಯಲ್ಲಿ ವೈಭವದ ಶೋಭಯಾತ್ರೆಯೊಂದಿಗೆ ಉತ್ಸವವು ಸಮಾಪನಗೊಂಡಿತು. ಶೋಭಾಯಾತ್ರೆಯನ್ನು ಜನಾರ್ದನ ಬೊಂಡಾಲ ಉದ್ಘಾಟಿಸಿದ್ದಾರೆ. ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಉತ್ಸವ ಸಮಿತಿ ಅದ್ಯಕ್ಷರಾದ ಗಣೇಶ್ ಶೆಟ್ಟಿ, ರಾಜೇಶ್ ಕೊಟ್ಟಾರಿ, ನಾಗೇಶ್ ಆಕೃತಿ ಕೇಂದ್ರ, ಯೋಗೀಶ್, ಪ್ರತಿಷ್ಠಾನ ಅಧ್ಯಕ್ಷ
ಯತೀನ್ ಕುಮಾರ್ ಕಾರ್ಯದರ್ಶಿ ವಜ್ರನಾಥ ಕಲ್ಲಡ್ಕ ಮತ್ತಿತರರು ಉಪಸ್ಥಿತರಿದ್ದರು.