ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ಸಭೆ ಮಂಗಳೂರುನಲ್ಲಿ ನಡೆದಿದ್ದು, ಬಂಟ್ವಾಳ ವಲಯಕ್ಕೆ ಅತ್ಯುತ್ತಮ ವಲಯ ಪ್ರಶಸ್ತಿ ದೊರಕಿದೆ. ಕರ್ನಾಟಕ ರಾಜ್ಯ ಛಾಯಾಗ್ರಾಹಕರ ಸಂಘ ದ ಅಧ್ಯಕ್ಷ ರಾದ ಎಚ್ ಎಸ್ ನಾಗೇಶ್, ಜಿಲ್ಲಾ ಧ್ಯಕ್ಷರಾದ ನವೀನ್ ರೈ, ಜಿಲ್ಲಾ ಸಂಚಾಲಕರಾದ ಗೋಪಾಲ್ ಸುಳ್ಯ, ಸೌತ್ ಕೆನರಾ ಫೋಟೋಗ್ರಾಫರ್ಸ್ ವಿವಿದೋದೇಶ ಸಹಕಾರ ಸಂಘದ ಅಧ್ಯಕ್ಷ ರಾದ ವಾಸುದೇವ ರಾವ್, ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷ ರಾದ ಆನಂದ್ ಏನ್. ಬಂಟ್ವಾಳ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.