ಭಾನುವಾರ ಸಂಜೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗದಿದ್ದರೂ ಸಿಡಿಲು ಗುಡುಗಿನ ಸದ್ದು ಕೇಳಿಬಂದಿದ್ದು, ಬಂಟ್ವಾಳ ತಾಲೂಕಿನ ಪಂಜಿಕಲ್ಲು ಸರಕಾರಿ ಪ್ರೌಢಶಾಲಾ ಕಟ್ಟಡ ಸಿಡಿಲಾಘಾತಕ್ಕೆ ಹಾನಿಯಾಗಿದೆ.ಭಾನುವಾರ ರಜೆಯ ದಿನವಾದ ಕಾರಣ ಭಾರಿ ಅನಾಹುತ ತಪ್ಪಿಹೋಗಿದೆ. ಶಾಲೆಯ ಸ್ವಿಚ್ ಬೋರ್ಡ್ ಸಹಿತ ಕೆಲವೆಡೆ ಸಣ್ಣ ಪ್ರಮಾಣದಲ್ಲಿ ಹಾನಿಯಾಗಿದೆ
.
ಶಾಲಾ ಕಟ್ಟಡ ಚುನಾವಣೆ ಸಂದರ್ಭ ಮತಗಟ್ಟೆ ಕೇಂದ್ರವಾಗಿಯೂ ಕಾರ್ಯಾಚರಿಸುತ್ತಿದ್ದು, ಕೂಡಲೇ ದುರಸ್ತಿ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.