ಬಂಟ್ವಾಳ: ರಾಜ್ಯಾದ್ಯಂತ ಪ್ರಜಾಸೇವೆ ಆಂದೋಲನ ಸಭೆಗಳು ಆರಂಭವಾಗಲಿದ್ದು, ಸರಕಾರದ ಮಾರ್ಗಸೂಚಿಯನ್ವಯ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿಯಲ್ಲಿ ಸೆಪ್ಟೆಂಬರ್ 5ರಂದು ನಡೆಯಲಿದೆ.
ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಸರ್ವಮಂಗಳ ಸಭಾಂಗಣದಲ್ಲಿ ಶಾಸಕ ರಾಜೇಶ್ ನಾಯ್ಕ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆಯಬೇಕು ಎಂದು ಬಂಟ್ವಾಳ ತಹಸೀಲ್ದಾರ್ ಮಂಜುನಾಥ್ ಸುದ್ದಿಗಾರರಿಗೆ ತಿಳಿಸಿದರು.
ಬೆಳಗ್ಗೆ 10 ಕ್ಕೆ ಸಭೆ ಆರಂಭಗೊಳ್ಳಲಿದ್ದು, ಬಳಿಕ ಅಹವಾಲು ಸ್ವೀಕಾರ ನಡೆಯಲಿದೆ. ತಾಲೂಕಿನ ಎಲ್ಲ ಸಾರ್ವಜನಿಕರು ಭಾಗವಹಿಸಬಹುದು, ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದು, ಸ್ಪಂದಿಸಲಿದ್ದಾರೆ. ಯಾವುದೇ ವಿಷಯಕ್ಕೆ ಸಂಬಂಧಿಸಿ, ಸಾರ್ವಜನಿಕರು ತಮ್ಮ ಅಹವಾಲುಗಳು, ಸಮಸ್ಯೆಗಳನ್ನು ಅಲ್ಲಿ ಮಂಡಿಸಬಹುದು, ಮುಂದಿನ ದಿನಗಳಲ್ಲಿ ಶನಿವಾರಗಳಂದು ಸಭೆ ಆಯೋಜಿಸುವ ಕುರಿತು ಸೂಚನೆ ಇದ್ದು, ಸಾರ್ವಜನಿಕರು ಭಾಗವಹಿಸಿ ಅಹವಾಲು ಮಂಡಿಸಬಹುದು ಎಂದರು.