ಸೆಪ್ಟೆಂಬರ್ 2ರಂದು ಕರ್ನಾಟಕ ಪಬ್ಲಿಕ್ ಶಾಲೆ ಬೆಳ್ಳಾರೆ ಇಲ್ಲಿ ಆಯೋಜಿಸಿರುವ ಜಿಲ್ಲಾ ಮಟ್ಟದ 14 ಮತ್ತು 17ರ ವಯೋಮಾನದ ಬಾಲಕ -ಬಾಲಕಿಯರ -20 ಕೆ. ಜಿ. ವಿಭಾಗದ ಕರಾಟೆ ಪಂದ್ಯಾಟದಲ್ಲಿ ಎಲ್. ಸಿ. ಆರ್. ಇಂಡಿಯನ್ ವಿದ್ಯಾಸಂಸ್ಥೆಯ ಪ್ರಾಥಮಿಕ ವಿಭಾಗದ 6ನೇ ತರಗತಿಯ ವಿದ್ಯಾರ್ಥಿ, ತಲ್ಕತ್ ಮತ್ತು ತಾಹಿರ ದಂಪತಿಗಳ ಪುತ್ರನಾದ ತಂಝಿಲ್ ಅಹಮ್ಮದ್ ಭಾಗವಹಿಸಿ ತೃತೀಯ ಸ್ಥಾನ ಗಳಿಸಿ ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ.
ಇವರಿಗೆ ಕರಾಟೆ ತರಬೇತುದಾರರಾದ ಅಶೋಕ್ ಆಚಾರ್ಯ ತರಬೇತಿ ನೀಡಿರುತ್ತಾರೆ. ವಿಜೇತ ವಿದ್ಯಾರ್ಥಿ ಯನ್ನು ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಜೋಸ್ಟನ್ ಲೋಬೋ, ಸಂಯೋಜಕರಾದ ಯಶವಂತ್ ಜಿ. ನಾಯಕ್ ಹಾಗೂ ಮುಖ್ಯೋಪಾಧ್ಯಾಯಿನಿ ಯಾದ ವಿಜಯ ಕೆ ಇವರು ಅಭಿನಂದಿಸಿದ್ದಾರೆ.