ವಾಮದಪದವಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಶಿವರಾಮ ಕಾರಂತ ಕನ್ನಡ ಸಂಘ ಒಂದು ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿತು.
ಡಾ. ಸಂತೋಷ್ ಆಳ್ವ ಮಾತನಾಡಿ, ಭಾಷೆ ಮತ್ತು ಸಾಹಿತ್ಯ ಮನುಷ್ಯನನ್ನು ಜಂಗಮ ಜಗತ್ತಿನ ಇತರ ಜಂತುಗಳಿಗಿಂತ ಭಿನ್ನವಾಗಿಸಿದೆ ವರ್ತಮಾನ ಸಂಕಟಗಳನ್ನು ಮೀರಿಸುವ ಶಕ್ತಿ ಸಾಹಿತ್ಯಕ್ಕಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಿನ್ಸಿಪಾಲ್ ಡಾ.ಮಹೇಶ್ ಕೆ.ಬಿ. ಅವರು ಸಾಹಿತ್ಯದ ಓದು ಸಾಂಪ್ರದಾಯಿಕತೆಯನ್ನು ಬಿಡಿಸಿಕೊಂಡು ತಂತ್ರಜ್ಞಾನದೊಟ್ಟಿಗೆ ಬೆಸೆದು ಹೊಸ ಹಾದಿಯಲ್ಲಿ ಸಾಗಬೇಕಾದ ಅನಿವಾರ್ಯತೆ ಇದೆ ಎಂದರು.
ಐಕ್ಯೂಎಸಿ ಸಂಚಾಲಕರಾದ ಡಾ.ವಿಶಾಲ್ ಪಿಂಟೋ, ವಿದ್ಯಾರ್ಥಿ ಕ್ಷೇಮಪಾಲನ ವೇದಿಕೆಯ ಮುಖ್ಯ ಸಂಚಾಲಕರಾದ ಪ್ರೊ.ಕೋಕಿಲಾ.ಎಚ್.ಎಸ್. ಹಾಗೂ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ.ಸತೀಶ್ ಗೌಡ ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ.ಲೋಹಿತ್.ಕೆ.ಸಿ ಸ್ವಾಗತಿಸಿದರು. ಪ್ರಾಧ್ಯಾಪಕರಾದ ಡಾ.ಪುಟ್ಟಲಕ್ಷ್ಮಮ್ಮ ವಂದಿಸಿದರು. ದ್ವಿತಿಯ ಬಿ.ಎಸ್.ಡಬ್ಲ್ಯೂ. ವಿದ್ಯಾರ್ಥಿನಿ ನಿತಿಕ್ಷಾ ಹಾಗೂ ತೃತೀಯ ಬಿ.ಕಾಂ. ವಿದ್ಯಾರ್ಥಿನಿ ಹರ್ಷಿತಾ ನಿರ್ವಹಿಸಿದರು.
(more…)