ಬೆಂಜನಪದವು ಸರ್ಕಾರಿ ಪದವಿಪೂರ್ವ ಕಾಲೇಜಿನ ಪಂಜೆ ಸಾಹಿತ್ಯ ಸಂಘ ಹಾಗೂ ಕರ್ನಾಟಕ ಗಮಕ ಕಲಾ ಪರಿಷತ್ತಿನ ಬಂಟ್ವಾಳ ಘಟಕದ ವತಿಯಿಂದ ಮಂಜುಳಾ ಸುಬ್ರಹ್ಮಣ್ಯ ಹಾಗೂ ಪ್ರಚೇತ್ ರಾಮ್ ಇವರಿಂದ ಪಠ್ಯಾಧಾರಿತ ಗಮಕ ವಾಚನ ಕಾರ್ಯಕ್ರಮ ನಡೆಯಿತು.
ವ್ಯಾಖ್ಯಾನಕಾರರಾಗಿ ಕಾರ್ತಿಕೇಯ ಆರ್ ಮಯ್ಯ ಲಕ್ಷ್ಮೀಶ ಕವಿಯ ಜೈಮಿನಿ ಭಾರತದ ಕರುಣಾಳು ರಾಘವನಲ್ಲಿ ತಪ್ಪಿಲ್ಲ ಭಾಗದ ಪ್ರಸಂಗಗಳನ್ನು ಭಾವಪೂರ್ಣವಾಗಿ ಪ್ರಸ್ತುತ ಪಡಿಸಿದರು. ಪ್ರಚೇತ್ ರಾಮ್ ಅವರು ನರಹರಿ ಕವಿಯ ತೊರವೆ ರಾಮಾಯಣದ ದಶರಥ ಪುತ್ರರ ಜನನ ಭಾಗವನ್ನು ಹಾಡಿ ವಿದ್ಯಾರ್ಥಿಗಳಲ್ಲಿ ರಸಾಸ್ವಾದವನ್ನುಂಟುಮಾಡಿದರು.
ಇವರಿಗೆ ಅಪ್ರಮೇಯ ವೇಣುವಾದನದಲ್ಲಿ ಸಹಕರಿಸಿದರು. ಕರ್ನಾಟಕ ಗಮಕ ಕಲಾ ಪರಿಷತ್ತಿನ ಬಂಟ್ವಾಳ ಘಟಕದ ಅಧ್ಯಕ್ಷ ರವಿಶಂಕರ ಮಯ್ಯ, ಕೋಶಾಧಿಕಾರಿ ಶಾಂತಾರಾಮ ರಾವ್ ಉಪಸ್ಥಿತರಿದ್ದರು.ವಿದ್ಯಾಭಿಮಾನಿ ಸುಧಾಕರ ರಾವ್ ಪೂವಳ ಅವರು ಸಂಸ್ಥೆಯ ಗ್ರಂಥಾಲಯಕ್ಕೆ ಸುಮಾರು ನಲುವತ್ತೈದು ಸಾವಿರ ರೂಪಾಯಿ ಮೌಲ್ಯದ ಗ್ರಂಥಗಳನ್ನು ದಾನವಾಗಿ ನೀಡಿ ,ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಸಂಸ್ಥೆಯ ಪ್ರಿನ್ಸಿಪಾಲ್ ಕವಿತ ಅವರು ವಿದ್ಯಾರ್ಥಿಗಳು ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿ, ದಾನಿಗಳು ಹಾಗೂ ಕಲಾವಿದರಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಗಮಕ ವಾಚನ ಕಾರ್ಯಕ್ರಮವನ್ನು ಹೇಮ ನಡೆಸಿಕೊಟ್ಟರು. ಕನ್ನಡ ಉಪನ್ಯಾಸಕರಾದಪ್ರಣಮ್ಯ ಸ್ವಾಗತಿಸಿ,ಆಂಗ್ಲ ಭಾಷಾ ಉಪನ್ಯಾಸಕ ರಾಧೇಶ ತೋಳ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
(more…)