ಬೆಂಜನಪದವಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಮಂಗಳೂರಿನ ಎಎಸ್ ಸಿ ಎ ಸಂಸ್ಥೆಯ ಸಹಯೋಗದೊಂದಿಗೆ ಕಾಮರ್ಸ್ ಒಲಿಂಪಿಯಾಡ್ ಮತ್ತು ಪಿ ಯು ಸಿ ನಂತರ ಇರುವ ವ್ಯಾಸಂಗ ಹಾಗೂ ಉದ್ಯೋಗ ಅವಕಾಶಗಳ ಕುರಿತು ಮಾಹಿತಿ ಕಾರ್ಯಾಗಾರ ನಡೆಸಲಾಯಿತು.
ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ಮಾನಸ ಶೆಟ್ಟಿ ಹಾಗೂ ವಿಶ್ವ ಜೋಯಿಸ್ ಅವರು ಒಲಿಂಪಿಯಾಡ್ ನಿರ್ವಹಿಸಿದರು ಮತ್ತು ವಿಜೇತರಿಗೆ ಬಹುಮಾನ ವಿತರಿಸಿದರು.
ದ್ವಿತೀಯ ವಾಣಿಜ್ಯ ವಿಭಾಗದ ಸಾತ್ವಿಕ್ ಫುರ್ಟಾಡೋ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ಪ್ರಥಮ ವಾಣಿಜ್ಯ ವಿಭಾಗದ ಹರ್ಷಿತ್ ದ್ವಿತೀಯ ಸ್ಥಾನ, ಫಾತಿಮಾ ತ್ವೈಬಾ ಹಾಗೂ ಪ್ರಜ್ವಲ್ ಡಿ ಕುಲಾಲ್ ತೃತೀಯ ಸ್ಥಾನ ಪಡೆದರು.
ಪ್ರಿನ್ಸಿಪಾಲ್ ಕವಿತ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯನ್ನು ಹಾಕಿಕೊಂಡು ಅಧ್ಯಯನಶೀಲರಾದಾಗ ಒದಗಿಸುವ ಅವಕಾಶಗಳು ಸಾರ್ಥಕವಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಆಂಗ್ಲ ಭಾಷಾ ಉಪನ್ಯಾಸಕ ರಾಧೇಶ ತೋಳ್ಪಾಡಿ ಎಸ್ ಕಾರ್ಯಕ್ರಮ ನಿರೂಪಿಸಿದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾದ ಚಂದ್ರಶೇಖರ ಎಎಸ್ ಸಿ ಎ ನಿರ್ದೇಶಕ ಅನ್ವೇಷ್ ಶೆಟ್ಟಿ ಹಾಗೂ ಸಂಸ್ಥೆಯ ಸರ್ವ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದರು.
| ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ ಮಾಹಿತಿ ಕಾರ್ಯಕ್ರಮ (more…)