??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
ಕಲ್ಲಡ್ಕದ ಗೇರುಕಟ್ಟೆಯಲ್ಲಿರುವ ಶ್ರೀ ರಾಮಚಂದ್ರಾಪುರ ಮಠದ ಅಂಗಸಂಸ್ಥೆ ಶ್ರೀ ಉಮಾಶಿವ ಕ್ಷೇತ್ರದ ಪುಷ್ಕರಿಣಿಯ ಅಭಿವೃದ್ಧಿ ಕಾರ್ಯಕ್ಕೆ ಕರ್ಣಾಟಕ ಬ್ಯಾಂಕ್ ವತಿಯಿಂದ 20 ಲಕ್ಷ ರೂಪಾಯಿ ನೆರವು ಹಸ್ತಾಂತರ ಕಾರ್ಯಕ್ರಮ ಶುಕ್ರವಾರ ಕ್ಷೇತ್ತದಲ್ಲಿ ನಡೆಯಿತು.
ಬ್ಯಾಂಕ್ ಒದಗಿಸಿದ ಇಪ್ಪತ್ತು ಲಕ್ಷ ರೂಪಾಯಿ ಚೆಕ್ ಅನ್ನು ಬ್ಯಾಂಕ್ ಮಂಗಳೂರು ವಲಯದ ಮುಖ್ಯಸ್ಥ, ಮುಖ್ಯ ಪ್ರಬಂಧಕರಾದ ಲಕ್ಷ್ಮೀನಾರಾಯಣ ಅವರು ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ರಾಕೋಡಿ ಈಶ್ವರ ಭಟ್ ಅವರಿಗೆ ಹಸ್ತಾಂತರಿಸಿದರು.
ಕರ್ಣಾಟಕ ಬ್ಯಾಂಕ್ ಸಿ.ಎಸ್.ಆರ್. ನಿಧಿ ವತಿಯಿಂದ ಸಾರ್ವಜನಿಕರಿಗೆ ಉಪಯೋಗವಾಗುವ ಕಾರ್ಯಕ್ಕೆ ನೆರವಾಗುವ ಕಾರ್ಯ ಮಾಡಲಾಗುತ್ತಿದೆ. ಜನರಿಂದ ಬಂದ ದುಡ್ಡನ್ನು ಜನರಿಗೋಸ್ಕರ ವಿನಿಯೋಗಿಸುತ್ತಿದ್ದೇವೆ. ಈ ವರ್ಷ ಗಮನಾರ್ಹ ಲಾಭ ಪಡೆದಿದ್ದು, ಬ್ಯಾಂಕ್ ಪ್ರಗತಿಯತ್ತ ಮುನ್ನಡೆದಿದೆ ಎಂದು ಅವರು ಈ ಸಂದರ್ಭ ಹೇಳಿದರು.
ಕರ್ಣಾಟಕ ಬ್ಯಾಂಕ್ ಬಿ.ಸಿ.ರೋಡ್ ಶಾಖೆ ಮೆನೇಜರ್ ಭರತ್ ರಾಜ್, ಕಲ್ಲಡ್ಕ ಹವ್ಯಕ ವಲಯ ಅಧ್ಯಕ್ಷ ರಮೇಶ್ ಭಟ್ ಮಾವೆ, ಪ್ರಮುಖರಾದ ಪುಳು ಈಶ್ವರ ಭಟ್ , ಕೋಮಲೆ ಈಶ್ವರ ಭಟ್ , ಕೋಮಲೆ ಕೃಷ್ಣ ಭಟ್, ಸತೀಶ ಪಂಜಿಗದ್ದೆ, ಬಾಲಕ್ರಷ್ಠ್ಣ ಭಟ್ ಸಂಚಯಗಿರಿ, ಸೇವಾಸಮಿತಿ ಸದಸ್ಯರು ಎಸ್. ಎನ್ ಶ್ರೀಕಾಂತ್ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭ ವಿಷ್ಣುಸಹಸ್ರನಾಮ ಪಠಣ, ದುರ್ಗಾಪೂಜೆ ಸಂಪನ್ನಗೊಂಡಿತು.