ಮತದಾರರ ಪಟ್ಟಿಯ ಸಮಗ್ರ ಪರಿಶೀಲನೆ ಕಾರ್ಯಕ್ರಮ ಬಂಟ್ವಾಳ ತಾಲೂಕಿನಲ್ಲಿ ಮಂಗಳವಾರ ಆರಂಭಗೊಂಡಿತು. ಬಂಟ್ವಾಳ ಬಿ.ಮೂಡ ಗ್ರಾಮದ ಬಸ್ತಿಪಡ್ಪುವಿನ ಚೆನ್ನಮ್ಮ ಕುಟೀರ ನಿವಾಸದಲ್ಲಿ ವಾಸ್ತವ್ಯವಿರುವ ಕೇಂದ್ರದ ಮಾಜಿ ಹಣಕಾಸು ಸಚಿವ ಬಿ.ಜನಾರ್ದನ ಪೂಜಾರಿ ಅವರಿಗೆ ಮೊದಲನೇ ಎನಿಮೇಷನ್ ಫಾರ್ಮ್ ಅನ್ನು ವಿತರಿಸಲಾಯಿತು. ಸಮೀಕ್ಷೆಯ ವೈಖರಿ ಕುರಿತು ಮಾಜಿ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಬಂಟ್ವಾಳ ತಹಸೀಲ್ದಾರ್ ಮಂಜುನಾಥ್, ಚುನಾವಣಾ ಶಾಖೆ ಉಪತಹಸೀಲ್ದಾರ್ ನವೀನ್ ಕುಮಾರ್ ಬೆಂಜನಪದವು, ಬಿ.ಎಲ್.ಎ. ಸುನೀಲ್ ಕುಮಾರ್ ಭಂಡಾರಿಬೆಟ್ಟು, ಮೇಲ್ವಿಚಾರಕರಾದ ಗ್ರಾಮ ಆಡಳಿತ ಅಧಿಕಾರಿ ಯಶ್ವಿತಾ, ಮತಗಟ್ಟೆ ಅಧಿಕಾರಿ ದಾಮೋದರ ಪಡಿಯಾರ್ , ಕಚೇರಿ ಸಿಬ್ಬಂದಿ ಸದಾಶಿವ ಕೈಕಂಬ, ಅಕ್ಷತ್ ವಿಟ್ಲ ಉಪಸ್ಥಿತರಿದ್ದರು.