ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75ರ ಪೆರ್ನೆ ಗ್ರಾಮ ಪಂಚಾಯಿತಿ ಮಿತಿಯ ಕಡಂಬು ಸೇಡಿಯಾಪು ರಸ್ತೆ ಸಂಧಿಸುವಲ್ಲಿ ಪಂಚಾಯಿತಿ ರಸ್ತೆ ಭವಿಷ್ಯದ ಸಂಚಾರ ದಟ್ಟಣೆ ಪರಿಗಣಿಸಿ, ವಾಹನಗಳು ಎಡ, ಬಲ ತಿರುವು ಪಡೆಯಲು ಅನುಕೂಲವಾಗುವಂತೆ ಬೆಲ್ ಮೌತ್ ವಿನ್ಯಾಸ ಆಳವಡಿಸಲು ಸ್ಥಳೀಯರ ಪರವಾಗಿ ಬಳಕೆದಾರರ ಹೋರಾಟಗಾರ ದಿನೇಶ್ ಕೆ. ಭಟ್ ಪತ್ರ ಬರೆದು ವಿನಂತಿಸಿದ್ದಾರೆ.
ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಒ, ಬಂಟ್ವಾಳ ತಾಪಂ ಸಿಇಒ, ಪೆರ್ನೆ ಗ್ರಾಮ ಪಂಚಾಯಿತಿಗೆ ಅವರು ಪತ್ರಮುಖೇನ ಸಮಸ್ಯೆಯ ಕುರಿತು ವಿವರಿಸಿ ಪರಿಹಾರಕ್ಕೆ ಒತ್ತಾಯಿಸಿದ್ದಾರೆ.
ಯೋಜಿತ ಪುತ್ತೂರು ಸರಕಾರಿ ವೈದ್ಯಕೀಯ ಕಾಲೇಜಿಗೆ ರಾಷ್ಟ್ರೀಯ ಹೆದ್ದಾರಿ 75ರ ಪೆರ್ನೆ ಗ್ರಾಮ ಪಂಚಾಯಿತಿ ಮಿತಿಯ ಕಡಂಬು ವಿನಿಂದ ವ್ಯವಸ್ಥಿತ ಸುರಕ್ಷಿತ ಜನವಾಹನ ಸಂಚಾರ ಒದಗಿಬರಲು ಯುಕ್ತ ತಾಂತ್ರಿಕ ವಿನ್ಯಾಸದ ಎಡ, ಬಲ ತಿರುವು ಅವಕಾಶಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸಮಂಜನ ಕ್ರಮ ಕೈಗೊಳ್ಳುವಂತಾಗಲು ಅಗತ್ಯ ಸಮನ್ವಯ ಮಾಡಿಕೊಳ್ಳಬೇಕು ಎಂದವರು ವಿನಂತಿಸಿದ್ದಾರೆ.