ಯುಎಇ ಯುನೈಟೆಡ್ ಲೊರೆಟ್ಟೊ ಫ್ರೆಂಡ್ಸ್ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ನೊರೊನ್ಹಾ ಅಲ್ಲಿಪಾದೆ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಸಂಸ್ಥೆಯ 2026-28ನೇ ಸಾಲಿನ ನೂತನ ಸಾಲಿಗೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು, ಪ್ರಧಾನ ಕಾರ್ಯದರ್ಶಿಯಾಗಿ ಜೆವಿತಾ ರೋಡ್ರಿಗಸ್ ಸುರತ್ಕಲ್, ಜೊತೆ ಕಾರ್ಯದರ್ಶಿಯಾಗಿ ಗ್ಲೆವೀನಾ ಅರನ್ಹಾ ಅತ್ತೂರು, ಕೋಶಾಧಿಕಾರಿಯಾಗಿ ರಾಯ್ ಡಿಸೋಜ ಲೊರೆಟ್ಟೊ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸಿಲ್ವಿಯಾ ನೊರೊನ್ಹಾ ಲೊರೆಟ್ಟೊ, ಕ್ರೀಡಾ ಕಾರ್ಯದರ್ಶಿಯಾಗಿ ವಿನೋದ್ ಪಿಂಟೋ ಲೊರೆಟ್ಟೊ, ಮಾಧ್ಯಮ ಸಂಯೋಜಕಿಯಾಗಿ ಪ್ರೀತಿ ಡಿಸೋಜ ಕೋರ್ಡೆಲ್, ವಿದೇಶಿ ಸಂಯೋಜಕರಾಗಿ ಗ್ರೆಟ್ಟಾ ಫೆರ್ನಾಂಡಿಸ್, ಅಂಜಲೋರ್ ಹಾಗೂ ಸಚಿನ್ ನೊರೊನ್ಹಾ ಲೊರೆಟ್ಟೊ ಆಯ್ಕೆಯಾಗಿದ್ದಾರೆ.
ಸಭೆಯಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಅತ್ಯುತ್ತಮ ನಾಯಕತ್ವ ಹಾಗೂ ಸಮರ್ಪಿತ ಸೇವೆ ಸಲ್ಲಿಸಿದ ನಿರ್ಗಮನ ಅಧ್ಯಕ್ಷ ರೂಪೇಶ್ ಪಿಂಟೋ ಹಾಗೂ ತಂಡಕ್ಕೆ ಯು ಎಲ್ ಎಫ್ ಕೃತಜ್ಞತೆ ಸಲ್ಲಿಸಿತು. ಏಕತೆ ಮತ್ತು ಸೇವೆ ಎಂಬ ಧ್ಯೇಯವಾಕ್ಯದೊಂದಿಗೆ 2019ರ ನವೆಂಬರ್‍ನಲ್ಲಿ ಯುಎಇಯಲ್ಲಿ ಸ್ಥಾಪನೆಯಾದ ಯುನೈಟೆಡ್ ಲೊರೆಟ್ಟೊ ಫ್ರೆಂಡ್ಸ್ (ಯು ಎಲ್ ಫ್) ಇಂದು ಸಮುದಾಯ, ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳನ್ನು ಆಧಾರವಾಗಿಟ್ಟುಕೊಂಡು ಸದೃಢವಾಗಿ ಬೆಳೆಯುತ್ತಿದೆ. ಸಂಸ್ಥೆಯು ಕೊಂಕಣಿ ಸಂಸ್ಕೃತಿ ಮತ್ತು ಪರಂಪರೆಯನ್ನು ಉತ್ತೇಜಿಸಲು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದು, “ಕೊಂಕಣ್ ಉಡ್ಕಾನಾ” ಅದರ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಜೊತೆಗೆ, ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು, ವೈದ್ಯಕೀಯ ಸಹಾಯ, ಸ್ವಗ್ರಾಮಗಳಲ್ಲಿ ಮನೆ ನಿರ್ಮಾಣಕ್ಕೆ ಬೆಂಬಲ ಹಾಗೂ ಅಗತ್ಯವಿರುವವರಿಗೆ ಉದ್ಯೋಗ ಮತ್ತು ವೀಸಾ ಸಹಾಯ ಒದಗಿಸುವ ಮೂಲಕವೂ ಯು ಎಲ್ ಎಫ್ ಸಮಾಜ ಸೇವೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ.