Uncategorized

ಸಿಡಿಲು ಬಡಿದು ಹಾನಿ: ಕಾರಿಂಜ ದೇವಸ್ಥಾನಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಭೇಟಿ

ಬಂಟ್ವಾಳ: ಸಿಡಿಲು ಬಡಿದು ಹಾನಿಯಾಗಿರುವ ಮಹೋತಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭ ತಾಲೂಕು ತಹಸೀಲ್ದಾರ್ ಮಂಜುನಾಥ್ ಜೊತೆಗಿದ್ದು, ಶೀಘ್ರವಾಗಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಚರ್ಚಿಸಿದರು. ಇತಿಹಾಸ ಪ್ರಸಿದ್ದ ಕಾರಿಂಜ ಕ್ಷೇತ್ರದ ಮೇಲ್ಭಾಗದ ಕಲಶದ ಭಾಗಕ್ಕೆ ಸಿಡಿಲು ಬಡಿದು ಹಾನಿಯಾಗಿದೆ. ಇದನ್ನು ಶೀಘ್ರ ಸರಿಪಡಿಸಬೇಕಾಗಿದೆ. ಈ ನೆಲೆಯಲ್ಲಿ ಬಂಟ್ವಾಳ ತಹಸೀಲ್ದಾರ್ ಉಪಸ್ಥಿತಿಯಲ್ಲಿ ಊರಿನ ಪ್ರಮುಖರ ಜತೆಗೆ ಸ್ಥಳ ಭೇಟಿ ಮಾಡಲಾಗಿದೆ. ಆಗಿರುವ ನಷ್ಟದ ಪೂರ್ಣ ವಿವರವನ್ನು ಕೆಲವೇ ದಿನದಲ್ಲಿ ತಹಸೀಲ್ದಾರ್ ಅವರು ಧಾರ್ಮಿಕ ದತ್ತಿ ಇಲಾಖೆ, ಸರಕಾರದ ಗಮನಕ್ಕೆ ತರಲಿದ್ದಾರೆ ಎಂದು ಈ ವೇಳೆ ಶಾಸಕರು ತಿಳಿಸಿದರು.

ಹಾನಿಯಾದ ಭಾಗದ ದುರಸ್ತಿ ಕಾರ್ಯವನ್ನು ಆದಷ್ಟು ಶೀಘ್ರ ನಡೆಸುವ ಸಂಬಂಧ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಇದೆಲ್ಲದಕ್ಕೆ ಪೂರಕವಾಗಿ ಪ್ರಶ್ನಾಚಿಂತನೆಯನ್ನು ಇಟ್ಟು ಮುಂದಿನ ಕ್ರಮಗಳ ಬಗ್ಗೆ ಅವಲೋಕಿಸಲು ಊರಿನವರು ಅಭಿಪ್ರಾಯಪಟ್ಟಿದ್ದಾರೆ ಎಂದರು.  ಸರಕಾರ ಮಟ್ಟದಲ್ಲಿ ಮಾಡಬೇಕಾದ ಕಾರ್ಯಗಳ ಬಗ್ಗೆ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಸಚಿವರ ಜೊತೆಗೆ ಮಾತನಾಡಿ ಅನುದಾನ ಬಿಡುಗಡೆ ಮಾಡಲು ಒತ್ತಡ ಹಾಕುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದರು.

ಜಾಹೀರಾತು

ಈ ಸಂದರ್ಭದಲ್ಲಿ ಕಾರಿಂಜೇಶ್ವರ  ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೀರೇಂದ್ರ ಅಮೀನ್, ಕಾರಿಂಜೇಶ್ವರ  ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರದ ಜನಾರ್ದನ ಆಚಾರ್ಯ,ರಾಧಾ ಆಚಾರ್ಯ, ಬಂಟ್ವಾಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ಬಂಟ್ವಾಳ ಮಂಡಲದ ಬಿಜೆಪಿ ಮಾಧ್ಯಮ ಪ್ರಮುಖ್ ಪುರುಷೋತ್ತಮ ಶೆಟ್ಟಿ ವಾಮದಪದವು, ಬಂಟ್ವಾಳ ಬಿಜೆಪಿ ಕಾರ್ಯಾಲಯದ  ಕಾರ್ಯದರ್ಶಿ ಪ್ರಣಾಮ್ ಅಜ್ಜಿಬೆಟ್ಟು, ಕಾವಳಪಡೂರು ಸೊಸೈಟಿ ಅಧ್ಯಕ್ಷ ಪ್ರಮೋದ್ ರೈ ಕಾಡಬೆಟ್ಟು , ಕಾವಳಪಡೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಲಕ್ಷ್ಮಿನಾರಾಯಣ ಶರ್ಮಾ, ಕಾವಳಮೂಡೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಜಿತ್ ಶೆಟ್ಟಿ ಕಾರಿಂಜ , ಕಾರಿಂಜ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ  ಅಧ್ಯಕ್ಷ  ಜಿನರಾಜ್ ಅರಿಗ ,ಕಾರಿಂಜೇಶ್ವರ  ದೇವಸ್ಥಾನದ ವ್ಯವಸ್ಥಾಪನಸಮಿತಿಯ ಮಾಜಿ ಸದಸ್ಯರದ ರಾಘವೇಂದ್ರ ನಾಯ್ಕ.   ಕಾವಳಮೂಡೂರು ಬಿಜೆಪಿ ಶಕ್ತಿ ಕೇಂದ್ರ ಪ್ರಮುಖ ಜಯಪ್ರಸನ್ನ ನಿಡ್ವಾಲ್, ಕಾವಳಪಡೂರು ಬಿಜೆಪಿ ಶಕ್ತಿ ಕೇಂದ್ರ ಪ್ರಮುಖ ಸತೀಶ್ ಶೆಟ್ಟಿ ಮಧ್ವ, ಕಾಡಬೆಟ್ಟು ಬಿಜೆಪಿ ಶಕ್ತಿ ಕೇಂದ್ರ ಪ್ರಮುಖ ಚಂದಪ್ಪ ಮೂಲ್ಯ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಮೋಹನ್ ಆಚಾರ್ಯ ಹಾಗೂ ಪ್ರಮುಖರಾದ ಗೋಪಾಲ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ ಕುತ್ರಿಮಾರ್, ಶಾಂತಿಕ್ ಜೈನ್, ಸತೀಶ್ ಕರಿಂಜ, ಪ್ರಕಾಶ್ ಅಂಚನ್, ಸಂತೋಷ್, ವಿನಯ್ ಮ್ಯಾನೇಜರ್, ಹಾಗೂ ಅರ್ಚಕ ವೃಂದದವರು ಉಪಸ್ಥಿತರಿದ್ದರು

VNR GOLD
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.