ಬಂಟ್ವಾಳ: ನೆಟ್ಲದ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ದೇವರಿಗೆ ಸೀಯಾಳಾಭಿಷೇಕವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯ, ಜನಜಾಗೃತಿ ವೇದಿಕೆ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಸಹಕಾರದೊಂದಿಗೆ ನಡೆಯಿತು ಪುರೋಹಿತ ಪ್ರಕಾಶ್ ಭಟ್ ಅಭಿಷೇಕ ಕಾರ್ಯ ನೆರವೇರಿಸಿದರು.
ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯ ಮೇಲ್ವಿಚಾರಕ ಸುಖರಾಜ್, ಜನಜಾಗೃತಿ ವೇದಿಕೆ ಕಲ್ಕಡ್ಕ ವಲಯ ಅಧ್ಯಕ್ಷ ಭಟ್ಯಪ್ಪ ಶೆಟ್ಟಿ,ಯೋಜನೆಯ ಕಲ್ಲಡ್ಕ ವಲಯ ಅಧ್ಯಕ್ಷೆ ತುಳಸಿ, ಗೊಳ್ತಮಜಲು ಒಕ್ಕೂಟ ಅಧ್ಯಕ್ಷ ಸೀತಾರಾಮ್ ಶೆಟ್ಟಿ, ಬೋಳಂತೂರು ಒಕ್ಕೂಟ ಅಧ್ಯಕ್ಷೆ ಸೀತಾ ರಾಮಚಂದ್ರ ಆಚಾರ್ಯ, ವೀರಕಂಭ ಒಕ್ಕೂಟ ಅಧ್ಯಕ್ಷೆ ಶಾಂಭವಿ ಆಚಾರ್ಯ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕಿ ವಿದ್ಯಾ, ನಿಯೋಜಿತ ಅಧ್ಯಕ್ಷ ಗಣೇಶ್, ಶೌರ್ಯ ತಂಡದ ಸದಸ್ಯರು, ಒಕ್ಕೂಟಗಳ ಸೇವಾ ಪ್ರತಿನಿಧಿಗಳಾದ ಲೀಲಾವತಿ, ರೇವತಿ, ಸುಕನ್ಯ, ಅಶ್ವಿನಿ,ಗ್ರಾಮಾಭಿವೃದ್ಧಿ ಯೋಜನೆ ಪದಾಧಿಕಾರಿಗಳು, ಪ್ರಗತಿಬಂಧು ಸ್ವಸಹಾಯ ಸಂಘದ ಸದಸ್ಯರು, ದೇವಸ್ಥಾನದ ಭಕ್ತರು ಭಾಗವಹಿಸಿದ್ದರು.