ಬಂಟ್ವಾಳ ತಾಲೂಕಿನ ಹಲವೆಡೆ ಮಳೆ
ಬಂಟ್ವಾಳ: ಬಿ.ಸಿ.ರೋಡ್ ಸಹಿತ ಬಂಟ್ವಾಳ ತಾಲೂಕಿನ ಹಲವೆಡೆ ಗುಡುಗು ಸಹಿತ ಮಳೆ ಮಂಗಳವಾರ ಸಂಜೆ ಬಳಿಕ ಸುರಿಯಿತು.
ಸಂಜೆ ಬಿ.ಸಿ.ರೋಡ್ ಪೇಟೆ ಸಹಿತ ಪಾಣೆಮಂಗಳೂರು ಸುತ್ತಮುತ್ತ ಉತ್ತಮ ಮಳೆಯಾಯಿತು. ರಾತ್ರಿ ಸುಮಾರು 9.30ರ ವೇಳೆ ವಿಟ್ಲ, ಸೂರಿಕುಮೇರು, ಮಾಣಿ ಸಹಿತ ತಾಲೂಕಿನ ಹಲವೆಡೆ ಭಾರಿ ಮಳೆಯಾಗಿದೆ
ಇದರಿಂದ ಹಲವೆಡೆ ವಿದ್ಯುತ್ ಪೂರೈಕೆಗೆ ಅಡಚಣೆ ಉಂಟಾಯಿತು. ರಾತ್ರಿ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣದಲ್ಲಿ ದೂರದ ಊರುಗಳಿಗೆ ತೆರಳುವವರು ಕತ್ತಲು ಮತ್ತು ಮಳೆಯಿಂದ ಪರದಾಡಬೇಕಾಯಿತು.