ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮಂಕುಡೆ: ಎಂ.ಆರ್.ಪಿ.ಎಲ್. ಅನುದಾನದಲ್ಲಿ ನೂತನ ಕೊಠಡಿ ಹಾಗೂ ಶೌಚಾಲಯ ಲೋಕಾರ್ಪಣೆ
ವಿಟ್ಲ: ಗ್ರಾಮೀಣ ಪ್ರದೇಶದ ಶಾಲೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದ್ದು, ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವುದು ಊರಿನವರ ಜವಾಬ್ದಾರಿಯಾಗಿದೆ ಎಂದು ಸಂಸದ ಬ್ರಿಜೇಶ್ ಚೌಟ ಅಭಿಪ್ರಾಯಪಟ್ಟಿದ್ದಾರೆ.
ಅವರು ನವೆಂಬರ್ 9, ಸೋಮವಾರದಂದು ದ.ಕ. ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮಂಕುಡೆಗೆ ಎಂ.ಆರ್.ಪಿ.ಎಲ್. (MRPL) ಸಂಸ್ಥೆಯ ಸಿ.ಎಸ್.ಆರ್. (CSR) ಅನುದಾನದಲ್ಲಿ ನಿರ್ಮಿಸಲಾದ ನೂತನ ಎರಡು ಕೊಠಡಿಗಳು ಮತ್ತು ಶೌಚಾಲಯಗಳನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಇಯಾಗಿ ಭಾಗವಹಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ಸಮುದಾಯದ ಸಹಕಾರದಿಂದ ಮಾತ್ರ ಸರಕಾರಿ ಶಾಲೆಗಳು ಅಭಿವೃದ್ಧಿ ಹೊಂದಲು ಸಾಧ್ಯ. ಹಾಗಾಗಿ ಪ್ರತಿಯೊಬ್ಬರೂ ಕೈಜೋಡಿಸಿ ಸರಕಾರಿ ಶಾಲೆಗಳನ್ನು ಬೆಳೆಸಬೇಕು ಎಂದು ಕರೆ ನೀಡಿದರು.
ಈ ಸಮಾರಂಭದಲ್ಲಿ ಪ್ರಮುಖರಾದ ಅಭಿಷೇಕ್ ರೈ, ಮಾಧವ ಮಾವೆ, ಪುಷ್ಪರಾಜ್ ಶೆಟ್ಟಿ, ದೇವಪ್ಪ ಪೂಜಾರಿ, ದಿನೇಶ್ ಅಮ್ಟೂರು ಹರೀಶ್ ಟೈಲರ್, ರಾಜಾರಾಮ ಹೆಗ್ಡೆ, ಶಶಿಕಲಾ, ನತಾಲಿಯ, ಕೃಷ್ಣಪ್ಪ ಪೂಜಾರಿ, ಕಟ್ಟಡ ಗುತ್ತಿಗೆದಾರ ಅಖಿಲ್ ರೈ, ಶಾಲಾಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ (SDMC) ಅಧ್ಯಕ್ಷ ಹರೀಶ್ ಆಚಾರಿ, ಉಪಾಧ್ಯಕ್ಷೆ ಸುಪ್ರೀತ, ಲಕ್ಷ್ಮೀ ನಾರಾಯಣ ಅಡ್ಯಂತಾಯ ಹಾಗೂ ಮುಖ್ಯ ಶಿಕ್ಷಕಿ ಜೆಸಿಂತ ಡಿ ‘ಸಿಲ್ವ ಉಪಸ್ಥಿತರಿದ್ದರು.
ಜೊತೆಗೆ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಹಳೆವಿದ್ಯಾರ್ಥಿ ಮಿತ್ರರು, ಮಕ್ಕಳ ಪೋಷಕರು, ಶಾಲಾಭಿಮಾನಿಗಳು, ಶಿಕ್ಷಕ ವೃಂದದವರು, ಅಡುಗೆ ಸಿಬ್ಬಂದಿ, ಅಂಗನವಾಡಿ ಶಿಕ್ಷಕಿಯರು ಹಾಗೂ ಶಾಲೆಯ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು