ಬಂಟ್ವಾಳ : ಬಂಟ್ವಾಳ ತಾಲೂಕು ಬಿ.ಸಿ.ರೋಡ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಮಿತಿಯ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಯು.ಸುರೇಶ್ ನಾಯಕ್ ಆಯ್ಕೆಯಾಗಿದ್ದಾರೆ.
ಬಿ.ಸಿ.ರೋಡ್ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ಸಂಘದ ಅಧ್ಯಕ್ಷ ಎನ್.ದುರ್ಗಾದಾಸ್ ಶೆಣೈ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಆಡಳಿತ ಮಂಡಳಿ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಉಪಾಧ್ಯಕ್ಷರಾಗಿ ಆರ್.ಮಂಜುನಾಥ ಪೈ, ಕಾರ್ಯದರ್ಶಿಯಾಗಿ ಶ್ರೀಧರ ಹೆಗ್ಡೆ, ಜತೆ ಕಾರ್ಯದರ್ಶಿಗಳಾಗಿ ಮಧುಸೂಧನ ಶೆಣೈ, ದೇವಿದಾಸ ಭಟ್, ಕೋಶಾಧಿಕಾರಿಯಾಗಿ ಬಿ.ಕೃಷ್ಣ ನಾಯಕ್, ಕಾರ್ಯಕಾರಿ ಸದಸ್ಯರಾಗಿ ಅನಂತಕೃಷ್ಣ ನಾಯಕ್, ಹರೀಶ್ ಭಟ್, ಸದಾಶಿವ ಪೈ, ವಾಸುದೇವ ಭಂಡಾರ್ಕರ್, ವಿವೇಕ್ ಹೆಗ್ಡೆ ಆಯ್ಕೆಯಾಗಿದ್ದಾರೆ.
ಅಮೀಬಾ ಸೋಂಕಿನಿಂದ ಸಾವು ಸಂಭವಿಸಿಲ್ಲ: ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ (more…)