ಐಎಫ್ ಎಯಿಂದ ಒಂದು ತಿಂಗಳ ಕಾಲ “ಹಸಿರು ಹೊದಿಕೆಯಡಿ ತುಳು ಜೀವನದ ಸಾಂಸ್ಕೃತಿಕ ಪರಂಪರೆ” ವಿಶೇಷ ವಸ್ತುಪ್ರದರ್ಶನ – Details

“ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ (IFA) ಸಂಸ್ಥೆಯ ಆರ್ಕೈವ್ ಮತ್ತು ಮ್ಯೂಸಿಯಂಸ್ ಕಾರ್ಯಕ್ರಮದ ಅಡಿಯಲ್ಲಿ, ರಾಣಿ ಅಬ್ಬಕ್ಕ ತುಳು ಸಂಗ್ರಹಾಲಯ ಮತ್ತು ಅಧ್ಯಯನ ಕೇಂದ್ರದ ಹಾಗೂ ಟಾಟಾ ಟ್ರಸ್ಟ್ ಸಹಯೋಗದಲ್ಲಿ ತುಳುನಾಡಿನ ಸಂಸ್ಕೃತಿ, ಜೀವನಶೈಲಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ “ಹಸಿರು ಹೊದಿಕೆಯಡಿ– ತುಳು ಜೀವನದ ಸಾಂಸ್ಕೃತಿಕ ಪರಂಪರೆ” ಎಂಬ ವಿಶೇಷ ವಸ್ತುಪ್ರದರ್ಶನವನ್ನು ಒಂದು ತಿಂಗಳ ಕಾಲ ಆಯೋಜಿಸಲಾಗಿದೆ ಎಂದು ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಸ್ಥಾಪಕರಾದ ಪ್ರೊ. ತುಕಾರಾಂ ಪೂಜಾರಿ ಹೇಳಿದರು.

ಬಿ.ಸಿ.ರೋಡ್‌ನ ಸಂಚಯಗಿರಿಯಲ್ಲಿರುವ ಕೇಂದ್ರದ ಆವರಣದಲ್ಲಿ ಶನಿವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಗ್ರಹಾಲಯವು ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಸಾಂಸ್ಕೃತಿಕ ಆಕರ್ಷಣೆಯಾಗಿದ್ದು, ತುಳುನಾಡಿನ ಸಾಂಪ್ರದಾಯಿಕ ಜೀವನಶೈಲಿಯನ್ನು ಜೀವಂತವಾಗಿ ಪರಿಚಯಿಸುವ ಸಮಗ್ರ ಅನುಭವವನ್ನು ನೀಡುತ್ತಿದೆ. ಇಲ್ಲಿ ಪುರಾತನ ಕೃಷಿ ಉಪಕರಣಗಳು, ಮನೆಬಳಕೆಯ ವಸ್ತುಗಳು, ಜನಪದ ಕಲಾಕೃತಿಗಳು ಹಾಗೂ ಆಚರಣೆಗಳಿಗೆ ಸಂಬಂಧಿಸಿದ ಅಪರೂಪದ ಸಂಗ್ರಹಗಳು ಸಂರಕ್ಷಿಸಲ್ಪಟ್ಟಿವೆ.
ಈ ಬಾರಿ, ಮ್ಯೂಸಿಯಂ ವಿನ್ಯಾಸಕಾರರಾದ ಮಧುಶ್ರೀ ಕಾಮಕ್ ಮತ್ತು ಬ್ರಿಯಾನ್ ನೆಜಿಲ್ ಡಿ’ಸೋಜಾ ಅವರು ಐಎಫ್ ಎ ಹಾಗೂ ಟಾಟಾ ಟ್ರಸ್ಟ್ ನೆರವಿನಲ್ಲಿ ಈ ವಿಶೇಷ ವಸ್ತುಪ್ರದರ್ಶನವನ್ನು ಆಯೋಜಿಸಲಾಗಿದ್ದು, ಈ ಪ್ರದರ್ಶನದಲ್ಲಿ ತುಳು ಜನರ ಜೀವನಚಕ್ರವನ್ನು ಪ್ರತಿಬಿಂಬಿಸುವ ಹತ್ತು ಪ್ರಮುಖ ವಸ್ತುಗಳನ್ನು ಆಯ್ಕೆ ಮಾಡಲಾಗಿದೆ. ಹುಟ್ಟಿನಿಂದ ಅಂತ್ಯಕ್ರಿಯೆಗಳವರೆಗೆ ನಡೆಯುವ ಆಚರಣೆಗಳು ಮತ್ತು ದೈನಂದಿನ ಬದುಕಿನ ಅಂಶಗಳನ್ನುನೋಡುಗರಿಗೆ ಪರಿಚಯಿಸಲಾಗುತ್ತದೆ ಎಂದರು.

ಐಎಫ್ ಎ ಕಾರ್ಯಕ್ರಮ ಸಂಯೋಜಕಿ‌ ರುತ್ವಿಕಾ ಮಿಶ್ರಾ ರವರು ಮಾತನಾಡಿ, ಇಂದಿನ ಮಕ್ಕಳು ಈ ಪ್ರದರ್ಶನದ ಜೊತೆ ಜೋಡಿಸಿಕೊಂಡು ಇದರ ಸದುಪಯೋಗ ಪಡಿಸಿಕೊಂಡಾಗ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯವಿದೆ ಎಂದರು.

ಜಾಹೀರಾತು

ಐಎಫ್ ಎ ಗ್ರ್ಯಾಂಟಿಗಳಾದ ಮಧುಶ್ರೀ ಕಾಮಕ್ ಹಾಗೂ ಬ್ರಿಯಾನ್ ನೆಜಿಲ್ ಡಿ’ಸೋಜಾ ರವರು ಮಾತನಾಡಿ, ಮರದ ತೊಟ್ಟಿಲು, ತೆಂಗಿನಕಾಯಿ ಗೆರಟೆಯಿಂದ ತಯಾರಿಸಿದ ಉಪಕರಣಗಳು ಹಾಗೂ ವಿವಿಧ ಆಚರಣಾತ್ಮಕ ವಸ್ತುಗಳು ಪ್ರದರ್ಶನದ ಪ್ರಮುಖ ಆಕರ್ಷಣೆಗಳಾಗಿವೆ. ಈ ವಸ್ತುಗಳು ತುಳುನಾಡಿನ ಸಂಪ್ರದಾಯ, ಜೀವನೋಪಾಯ ಹಾಗೂ ಪರಿಸರ ಜ್ಞಾನವನ್ನು ಪ್ರತಿಬಿಂಬಿಸುತ್ತವೆ ಎಂದರು.

ಐ ಎಫ್ ಎ ಗ್ರ್ಯಾಂಟಿಗಳಾದ ಮಧುಶ್ರೀ ಕಾಮಕ್, ಬ್ರಿಯಾನ್ ಡಿ’ಸೋಜ, ರಾಣಿ ಅಬ್ಬಕ್ಕ ತುಳು ಬದುಕು ವಸ್ತು ಸಂಗ್ರಹಾಲಯದ ಕಾರ್ಯದರ್ಶಿ ಡಾ.ಆಶಾಲತಾ ಸುವರ್ಣ, ಕು.ಸಿಂಧೂರ, ಪಲ್ಲವಿ, ದಾಮೋದರ ಸಂಚಯಗಿರಿ ಉಪಸ್ಥಿತರಿದ್ದರು.

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಐಎಫ್ ಎಯಿಂದ ಒಂದು ತಿಂಗಳ ಕಾಲ “ಹಸಿರು ಹೊದಿಕೆಯಡಿ ತುಳು ಜೀವನದ ಸಾಂಸ್ಕೃತಿಕ ಪರಂಪರೆ” ವಿಶೇಷ ವಸ್ತುಪ್ರದರ್ಶನ – Details"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*