
ಬಂಟ್ವಾಳ: ಇತಿಹಾಸವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯವನ್ನು ನಡೆಸುತ್ತಿರುವ ರಾಣಿ ಅಬ್ಬಕ್ಕ ವಸ್ತು ಸಂಗ್ರಹಾಲಯವನ್ನು ಐಎಫ್ ಎ ಮತ್ತು ಟಾಟಾ ಸಂಸ್ಥೆ ಗುರುತಿಸಿರುವುದು ಶ್ಲಾಘನೀಯ ಕಾರ್ಯ ಎಂದು ಮಂಗಳೂರು ಸ್ವಸ್ತಿಕಾ ಬಿಸ್ ನೆಸ್ ಸ್ಕೂಲ್ ನ ಅಧ್ಯಕ್ಷರಾದ ಡಾ.ರಾಘವೇಂದ್ರ ಹೊಳ್ಳ ಹೇಳಿದರು.
ಬಿ.ಸಿ.ರೋಡಿನ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ಬೆಂಗಳೂರಿನ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ (IFA) ಸಂಸ್ಥೆಯ ಆರ್ಕೈವ್ ಮತ್ತು ಮ್ಯೂಸಿಯಂಸ್ ಕಾರ್ಯಕ್ರಮದ ಅಡಿಯಲ್ಲಿ, ರಾಣಿ ಅಬ್ಬಕ್ಕ ತುಳು ಸಂಗ್ರಹಾಲಯ ಮತ್ತು ಅಧ್ಯಯನ ಕೇಂದ್ರದ ಹಾಗೂ ಟಾಟಾ ಟ್ರಸ್ಟ್ ಸಹಯೋಗದಲ್ಲಿ ಶನಿವಾರ ಆರಂಭಗೊಂಡ “ಹಸಿರು ಹೊದಿಕೆಯಡಿ ತುಳು ಜೀವನದ ಸಾಂಸ್ಕೃತಿಕ ಪರಂಪರೆ” ಎಂಬ ವಿಶೇಷ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ತುಳುನಾಡಿನ ಪ್ರತೀ ವಸ್ತುಗಳು ಇತಿಹಾಸವನ್ನು ತಿಳಿಸುತ್ತದೆ, ಅದರಲ್ಲೂ ತೆಂಗಿನ ಗೆರಟೆ ಎನ್ನುವ ಚಿಕ್ಕವಸ್ತು ಮಾಡುವ ಇತಿಹಾಸದ ಪಾಠ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿರುವುದು ವಿಶೇಷ ಎಂದರು.
ಡಾ.ತುಕಾರಾಂ ಪೂಜಾರಿಯವರು, ಅವಿರತ ಶ್ರಮದ ಮುಖೇನ ಕಟ್ಟಿದ ಈ ವಸ್ತುಸಂಗ್ರಹಾಲಯ ಮುಂದಿನ ದಿನಗಳಲ್ಲಿ ದೇಶ ವಿದೇಶಿಗರ ಆಕರ್ಷಣೆಯ ಕೇಂದ್ರವಾಗಲಿದೆ ಎಂದರು.
ಐಎಫ್ ಎ ಕಾರ್ಯಕ್ರಮ ಸಂಯೋಜಕಿ ರುತ್ವಿಕಾ ಮಿಶ್ರಾ ರವರು ಮಾತನಾಡಿ,ಐಎಫ್ ಎ ಯ ಮೂಲ ಆಶಯಗಳು ರಾಣಿ ಅಬ್ಬಕ್ಕ ಕೇಂದ್ರದ ವಸ್ತುಗಳ ಮುಖೇನ ಜನಸಮುದಾಯಕ್ಕೆ ತಲುಪುತ್ತಿರುವುದು ಸಂತೋಷದ ವಿಚಾರ ಎಂದರು.
ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಡಾ.ತುಕಾರಾಮ್ ಪೂಜಾರಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಥಳೀಯ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಐಎಫ್ಎ ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎನ್ನುವುದಕ್ಕೆ ಈ ಕಾರ್ಯಕ್ರಮವೇ ಸ್ಪಷ್ಟ ನಿದರ್ಶನ ಎಂದ ಅವರು, ಕೇಂದ್ರದ ಸಹಯೋಗದಲ್ಲಿ ನಡೆಯವ ಮೂರುಯೋಜನೆಗಳಿಗೆ ಐಎಫ್ ಎ ಅನುದಾನದ ನೆರವು ನೀಡುತ್ತಿದೆ ಎಂದರು.
ಐಎಫ್‌ಎ ಅನುದಾನದ ಮುಖೇನ ವಸ್ತುಪ್ರದರ್ಶನವನ್ನು ಆಯೋಜಿಸಿರುವ ಕ್ಯುರೇಟರ್ ಗಳಾದ ಮಧುಶ್ರೀ ಕಾಮಕ್ ಹಾಗೂ ಬ್ರಿಯನ್ ಡಿಸೋಜಾ ರವರು ಮಾತನಾಡಿ, ವಸ್ತುಪ್ರದರ್ಶನದ ಆಯೋಜನೆ ಕುರಿತಾದ ಹಿನ್ನೋಟ ಹಾಗೂ ಮುನ್ನೋಟಗಳನ್ನು ವಿವರಿಸಿದರು. ಶ್ರಿಯದಿತ್ ಪ್ರಾರ್ಥಿಸಿದರು. ಸಿಂಧೂರಾ ಟಿ.ಪಿ. ಸ್ವಾಗತಿಸಿ, ವಂದಿಸಿದರು. ಡಾ.ಆಶಾಲತಾ ಸುವರ್ಣ ಸಹಕರಿಸಿದರು


Be the first to comment on "“ಹಸಿರು ಹೊದಿಕೆಯಡಿ ತುಳು ಜೀವನದ ಸಾಂಸ್ಕೃತಿಕ ಪರಂಪರೆ” ವಸ್ತುಪ್ರದರ್ಶನ ಉದ್ಘಾಟನೆ"