ಮಾರ್ಚ್ 2026 ರ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ತುಂಬೆ ಪ.ಪೂ.ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದಲ್ಲಿ 77 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 74 ವಿದ್ಯಾರ್ಥಿಗಳು ಉತ್ತೀರ್ಣರಾಗಿ 96 ℅ಫಲಿತಾಂಶ ಬಂದಿದೆ.

ಕಾಮರ್ಸ್ ನಲ್ಲಿ ಪರೀಕ್ಷೆಗೆ ಹಾಜರಾದ ,68 ವಿದ್ಯಾರ್ಥಿಗಳಲ್ಲಿ 63 ಮಂದಿ ಉತ್ತೀರ್ಣರಾಗಿ 93℅ ಫಲಿತಾಂಶ ಬಂದಿರುತ್ತದೆ.
ಕಲಾ ವಿಭಾಗದಲ್ಲಿ 29 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 27 ಮಂದಿ ಉತ್ತೀರ್ಣರಾಗಿ 93℅ ಫಲಿತಾಂಶ ಬಂದಿರುತ್ತದೆ ಎಂದು ಪ್ರಾಂಶುಪಾಲ ವಿ.ಸು.ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತುಂಬೆ ಕಾಲೇಜಿನ ಸರಾಸರಿ ಫಲಿತಾಂಶ 94℅ ಬಂದಿರುತ್ತದೆ. ವಿಜ್ಞಾನ ವಿಭಾಗದಲ್ಲಿ 28 ಡಿಸ್ಟಿಂಕ್ಷನ್,35 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ,ಕು.ಹಾಜಿರತ್ ಸಫಾ ಡಿ.ಬಿ 583 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿರುತ್ತಾಳೆ.,ಕಾಮರ್ಸ್ ವಿಭಾಗದಲ್ಲಿ ಹಾಜರಾದ ವಿದ್ಯಾರ್ಥಿಗಳಲ್ಲಿ 11 ಡಿಸ್ಟಿಂಕ್ಷನ್,44 ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರೆ ಕು.ಯಶಿಕಾ 572 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿರುತ್ತಾಳೆ.ಕಲಾ ವಿಭಾಗದಲ್ಲಿ ಹಾಜರಾದ ವಿದ್ಯಾರ್ಥಿಗಳಲ್ಲಿ 15 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕು. ಆಶಿಯಾ ಅಮ್ನಾ 492 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿರುತ್ತಾಳೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








Be the first to comment on "ದ್ವಿತೀಯ ಪಿಯುಸಿ: ತುಂಬೆ ಕಾಲೇಜಿಗೆ ಉತ್ತಮ ಫಲಿತಾಂಶ"