
ಯುವಪೀಳಿಗೆಗೆ ಭಗವಂತ ನಾಮಸ್ಮರಣೆ ನಿತ್ಯ ಪಠಿಸುವುದನ್ನು ಕಲಿಸಿ ಎಂದು ಪ್ರಖ್ಯಾತ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಹೇಳಿದರು.
ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವ ಸಮಾರಂಭದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು
ಯುವ ಪೀಳಿಗೆಗೆ ಶಿಸ್ತಿನ ನೆಪದಲ್ಲಿ ಕಟ್ಟುನಿಟ್ಟಿನ ನಿಯಮ ಹೇರಬೇಕು ಎಂದೇನೂ ಇಲ್ಲ, ಭಗವನ್ ನಾಮಸ್ಮರಣೆ ನಿತ್ಯ ಪಠಿಸುವುದನ್ನು ಕಲಿಸಿರಿ ಎಂದು ಹೆತ್ತವರಿಗೆ ಕಿವಿಮಾತು ಹೇಳಿದರು..
ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಹಿಂದು ಸಮಾಜ ಒಟ್ಟಾಗಬೇಕಾದ ಅಗತ್ಯವಿದೆ ಎಂದರು.
ಅಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ರಘುರಾಮ ಕಾರಂತ ವಹಿಸಿದ್ದರು
ಹಟ್ಟಿಯಂಗಡಿ ಕ್ಷೇತ್ರದ ಪ್ರಧಾನ ಅರ್ಚಕರು ಬಾಲಚಂದ್ರ ಭಟ್ ಉದ್ಘಾಟಿಸಿ ಮಾತನಾಡಿ, ದೇವರು ನಮ್ಮನ್ನು ರಕ್ಷಿಸಬೇಕು ಎಂದಿದ್ದರೆ ಯಾರದ್ದಾದರೂ ಪ್ರೇರಣೆ ಬೇಕು. ಪದ್ಯಾಣದಲ್ಲಿ ಕಲೆ ನೆಲೆಯಾಗಿದೆ ಎಂದರು..
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಅವಿನಾಶ್ ಸುವರ್ಣ, ಉದ್ಯಮಿ ರಘುನಾಥ ಸೋಮಯಾಜಿ, ಪುತ್ತೂರಿನ ಹಿಂದು ಸಂಘಟನೆ ಮುಖಂಡ ಮುರಳೀಕೃಷ್ಣ ಹಸಂತಡ್ಕ ಗೋಳ್ತಮಜಲು ಗುರುಶಿವ ಕ್ಷೇತ್ರದ ಮುಖ್ಯಸ್ಥರಾದ ಡಾ.ರಾಮಕೃಷ್ಣ ಶೆಟ್ಟಿ, ಉಮಾಮಹೇಶ್ವರ ಕ್ಷೇತ್ರ ಕಾಪಿಕಾಡ್ ಆಡಳಿತ ಮೊಕ್ತೇಸರ ಎ.ಜೆ.ಶೇಖರ್, ಯಕ್ಷಗಾನ ಹಿರಿಯ ಹಿಮ್ಮೇಳ ಕಲಾವಿದ ಪದ್ಯಾಣ ಶಂಕರನಾರಾಯಣ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಸಂಘಟನಾ ಕಾರ್ಯದರ್ಶಿ ಅನೆಯಾಲಗುತ್ತು ಶಿವಪ್ರಸಾದ್ ಶೆಟ್ಟಿ, ಸಂಚಾಲಕ ಗೋಪಾಲಕೃಷ್ಣ ಭಟ್ ಸೇರಾಜೆ, ಉಷಾ ಸತ್ಯನಾರಾಯಣ ಭಟ್ ಸೇರಾಜೆ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶ್ಯಾಮಸುದರ್ಶನ ಹೊಸಮೂಲೆ ಸ್ವಾಗತಿಸಿದರು.
ವಿಜೆ ವಿಖ್ಯಾತ್ ಮತ್ತು ಶರತ್ ಭಟ್ ಸೇರಾಜೆ ಕಾರ್ಯಕ್ರಮ ನಿರ್ವಹಿಸಿದರು.
.


Be the first to comment on "ಯುವಪೀಳಿಗೆಗೆ ಭಗವಂತನ ನಾಮ ನಿತ್ಯಪಠಣ ಮಾಡುವುದನ್ನು ಕಲಿಸಿ: ಪದ್ಯಾಣದಲ್ಲಿ ಶಿವಶ್ರೀ ಸ್ಕಂದಪ್ರಸಾದ್"