ಬಂಟ್ವಾಳ: ಅಯೋಧ್ಯೆ ಶ್ರೀ ರಾಮ ಮಂದಿರದಿಂದ ಹನುಮಗಿರಿಗೆ ಹೊರಟ ಶ್ರೀ ರಾಮ ಹನುಮ ಜ್ಯೋತಿ ರಥಯಾತ್ರೆಗೆ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯ ಸಮ್ಮುಖ ಸ್ವಾಗತಿಸಲಾಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಶ್ರೀ ರಕ್ತೇಶ್ವರಿ ಸನ್ನಿಧಿ ಸೇವಾ ಸಮಿತಿ ಅಧ್ಯಕ್ಷ ಬಿ.ಮೋಹನ್, ದೇವಸ್ಥಾನದ ಅರ್ಚಕ ರಘುಪತಿ ಭಟ್, ವಿಹಿಂಪ ಬಂಟ್ವಾಳ ಪ್ರಖಂಡ ಪ್ರಮುಖರಾದ ಪ್ರಸಾದ್ ಕುಮಾರ್ ರೈ, ಬುಡಾ ಮಾಜಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಹಾಗೂ ಸದಾಶಿವ ಬಂಗೇರ, ರಕ್ತೇಶ್ವರಿ ಸಮಿತಿ ಮಾಜಿ ಅಧ್ಯಕ್ಷ ವಿಶ್ವನಾಥ್, ದೇವಸ್ಥಾನದ ಸಮಿತಿಯ ಪದಾಧಿಕಾರಿಗಳಾದ ರಾಜೇಶ್ ಎಲ್. ನಾಯಕ್, ಎನ್. ಶಿವಶಂಕರ್, ಸತೀಶ್ ಕುಮಾರ್, ಬಿಜೆಪಿ ಮುಖಂಡರಾದ ಸುದರ್ಶನ ಬಜ, ಸುರೇಶ್ ಕೋಟ್ಯಾನ್, ಕಾರ್ತಿಕ್ ಬಲ್ಲಾಳ್, ಶಶಿಕಾಂತ ಶೆಟ್ಟಿ, ಸಂತೋಷ್ ಸರಪಾಡಿ, ಮಾಧವ ಕರ್ಬೆಟ್ಟು, ಪ್ರಣಾಮ್ ಅಜ್ಜಿಬೆಟ್ಟು ಮೊದಲಾದವರು ಹಾಜರಿದ್ದರು.