ಬಂಟ್ವಾಳ

ಅನಿಲ ವಿತರಣೆ: ಬಿಪಿಸಿಎಲ್ ಅಧಿಕಾರಿಗಳಿಂದ ಗ್ರಾಹಕರೊಂದಿಗೆ ಮಾತುಕತೆ

ಬಂಟ್ವಾಳ: ಭಾರತ್ ಗ್ಯಾಸ್ ಗೆ ಸಂಬಂಧಪಟ್ಟಂತೆ ಅಡುಗೆ ಅನಿಲ ವಿತರಣೆಯ ಕುರಿತು ಬಿಪಿಸಿಎಲ್ ಅಧಿಕಾರಿಗಳು ಬಂಟ್ವಾಳದ ಭಾರತ್ ಗ್ಯಾಸ್ ವಿತರಕರಾದ ಭದ್ರಾ ಗ್ಯಾಸ್ ಏಜನ್ಸಿಗೆ ದಿಢೀರ್ ಭೇಟಿ ನೀಡಿ, ವ್ಯವಸ್ಥೆಯ ಕುರಿತು ಪರಿಶೀಲಿಸಿ, ಗ್ರಾಹಕರೊಂದಿಗೆ ಮಾತುಕತೆ ನಡೆಸಿದರು.

ಬಿಪಿಸಿಎಲ್ ನ ಟೆರಿಟರಿ ಮ್ಯಾನೇಜರ್ ಸಂದೀಪ್ ಕುಮಾರ್ ರೈನಾ, ಮೆನೇಜರ್ ದರ್ಶಿಲ್ ಮಾಲವೀಯ ಭೇಟಿ ನೀಡಿ ವಿತರಣೆಯ ವಿಧಾನಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಗ್ರಾಹಕರೊಂದಿಗೆ ಅಡುಗೆ ಅನಿಲ ಪೂರೈಕೆ ವ್ಯವಸ್ಥೆ ಕುರಿತು ವಿಚಾರಿಸಿದರು. ಗ್ರಾಹಕರು ಯಾವುದೇ ವಿಷಯಕ್ಕೆ ಗಾಬರಿಗೊಂಡು ಅನಾವಶ್ಯಕವಾಗಿ ಅವಧಿಪೂರ್ವ ಬುಕ್ಕಿಂಗ್ ಮಾಡುವುದು ಬೇಡ, ಸಕಾಲಕ್ಕೆ ಸಿಲಿಂಡರ್ ಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗುತ್ತದೆ. ವಿತರಣೆಗೆ ಬರುವವರಿಗೆ ಒಟಿಪಿ ಸಂಖ್ಯೆಯನ್ನು ನೀಡಿ ಸಹಕರಿಸುವ ಕುರಿತು ಅವರು ವಿವರಿಸಿದರು.

ಜಾಹೀರಾತು
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.