ರಿಜಿಸ್ಟಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಆದೇಶದಂತೆ ಜನಗಣತಿ ಕಾಯ್ದೆ -1948ರ ಪ್ರಕಾರ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಭಾರತದ ಮೊದಲ ಡಿಜಿಟಲ್ ಜನಗಣತಿ ಕಾರ್ಯವನ್ನು ಎರಡು ಹಂತಗಳಲ್ಲಿ ನಡೆಸಿ, ಗಣತಿ ಮಾಹಿತಿಯನ್ನು ಸಂಗ್ರಹಿಸುವ ಪ್ರಕ್ರಿಯೆ ಚಾಲನೆಗೊಳ್ಳಲಿದೆ. ಈ ಬಗ್ಗೆ ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ವಯಂ ಮನೆ ಗಣತಿ ಕಾರ್ಯವನ್ನು ಮಾಡಲು ಅವಕಾಶವನ್ನು ನೀಡಲಾಗಿದೆ.

ಆದರಂತೆ, ಜನಗಣತಿ ಕಾಯ್ದೆ ಕಾಯ್ದೆಯ ಪ್ರಕಾರ ತಮ್ಮ ಮಾಹಿತಿ, ಹೆಸರು ಮತ್ತು ಗುರುತುಗಳು ಗೌಪ್ಯವಾಗಿ ಇಡಲಾಗುತ್ತದೆ. ತೆರಿಗೆ, ಪೋಲೀಸ್ ಅಥವಾ ತನಿಖೆಯಲ್ಲಿ ಉಪಯೋಗಿಸುವುದಿಲ್ಲ. ಸುರಕ್ಷಿತ ಸರ್ವರ್ ಗಳಲ್ಲಿ ಮಾಹಿತಿಯನ್ನು ಎನ್ಕ್ರಿಪ್ಟ್ ಮಾಡಲಾಗುತ್ತದೆ. ರಾಷ್ಟ್ರ ನಿರ್ಮಾಣಕ್ಕಾಗಿ ಮಾತ್ರ ಬಳಸ ಲಾಗುತ್ತದೆ ಎಂದು ಬಂಟ್ವಾಳ ತಹಸೀಲ್ದಾರ್ ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಿಟ್ಟಿನಲ್ಲಿ ಸಾರ್ವಜನಿಕರು ಏ1ರಿಂದ ಏಪ್ರಿಲ್15ರವರೆಗೆ ನಿರ್ದೇಶನಾಲಯದಿಂದ ನೀಡಿರುವ ಅಧಿಕೃತ ಪೋರ್ಟಲ್ https://se.census.gov.in/.census.gov.in ಗೆ ಭೇಟಿ ನೀಡಿ, ಸ್ವಯಂ ಮನೆ ಗಣತಿ ಕಾರ್ಯವನ್ನು ಮಾಡಬಹುದಾಗಿದೆ. ಇದು ಒಂದು ವಿಶೇಷ ಸೌಲಭ್ಯವಾಗಿದೆ ಎಂದಿದ್ದಾರೆ.
- ಅಧಿಕೃತ ಪೋರ್ಟಲ್ se.census.gov.in ಗೆ ಭೇಟಿ ನೀಡಿ
- ತಮ್ಮ ಮೊಬೈಲ್ ಸಂಖ್ಯೆಗೆ ಬರುವ OTP ಮೂಲಕ ಲಾಗಿನ್ ಆಗುವುದು
- ತಮ್ಮ ರಾಜ್ಯ , ಜಿಲ್ಲೆ ಹಾಗೂ ಸ್ಥಳೀಯ ವಿವರಗಳನ್ನು ಆಯ್ಕೆಮಾಡಿಕೊಳ್ಳುವುದು
- ಡಿಜಿಟಲ್ ಮ್ಯಾಪ್ ನಲ್ಲಿ ನಿಮ್ಮ ಮನೆಯ ಸ್ಥಳವನ್ನು ಗುರುತಿಸುವುದು
- ನಿಮ್ಮ ಮನೆ ಮತ್ತು ಕುಟುಂಬಕ್ಕೆ ಸಂಬಂಧಿಸಿದ ವಿವರಗಳನ್ನು ಭರ್ತಿ ಮಾಡುವುದು
- ಸಲ್ಲಿಸಿದ ನಂತರ ನಿಮ್ಮ SE ID (SELF ENUMERATION ID) ಸ್ವೀಕರಿಸಲಾಗುತ್ತದೆ
- ಸದ್ರಿ SE ID (SELF ENUMERATION ID) ನ್ನು ಸುರಕ್ಷಿತವಾಗಿರಿಸಿಕೊಳ್ಳಿರಿ
- 16-04-2026ರ ನಂತರ ತಮ್ಮ ಮನೆಗೆ ಗಣತಿದಾರರು ಭೇಟಿ ನೀಡಿದಾಗ ಈ ಮೇಲಿನಂತೆ ಪಡೆದುಕೊಂಡ ನಿಮ್ಮ SE ID (SELF ENUMERATION ID) ಯನ್ನು ಒದಗಿಸಬೇಕು.
- ಗಣತಿದಾರರು SE ID (SELF ENUMERATION ID) ಮೂಲಕ ವಿವರಗಳನ್ನು ಪರಿಶೀಲಿಸಿಕೊಂಡು ದೃಢೀಕರಿಸುತ್ತಾರೆ.
- ಮನೆ ಗಣತಿಯ ಕಾರ್ಯದ ನಿಖರತೆ ಮತ್ತು ಸಂಪೂರ್ಣತೆಯನ್ನು ಖಚಿತಪಡಿಸಕೊಳ್ಳಲು ಗಣತಿದಾರರು ಮತ್ತು ಮೇಲ್ವಿಚಾರಕರ ಪರಿಶೀಲನೆಗೆ ಒಳಪಟ್ಟಿರುತ್ತದೆ
- ಇದರಿಂದಾಗಿ ಸಮಯದ ಉಳಿತಾಯವಾಗುತ್ತದೆ. ನಿಖರವಾದ ಮಾಹಿತಿ ಸಂಗ್ರಹವಾಗಿ ವೇಗವಾದ ಮಾಹಿತಿಗಳ ಸಂಸ್ಕರಣೆಯಾಗುತ್ತದೆ.
ತಾಲೂಕಿನ ಎಲ್ಲಾ ಸಾರ್ವಜಿನಿಕರು ತಾವೇ ಆನ್ ಲೈನ್ ಲಿಂಕ್ https://se.census.gov.in ಮೂಲಕ ಭಾಗವಹಿಸಿ, ಗಣತಿಯನ್ನು ಮಾಡುವಂತೆ ತಹಸೀಲ್ದಾರ್ ಮನವಿ ಮಾಡಿದ್ದಾರೆ.


Be the first to comment on "ಜನಗಣತಿ: ಮೊದಲ ಹಂತ ಮನೆ ಪಟ್ಟಿ, ಸ್ವಯಂ ಮನೆಗಣತಿಗೆ ಅವಕಾಶ – Details"