
ಬಂಟ್ಚಾಳ : ಇಲ್ಲಿನ ನಂದನಹಿತ್ಲು ಶ್ರೀ ವೈದ್ಯನಾಥ,ಅರಸು, ಜುಮಾದಿ ಬಂಟ ದೈವಸ್ಥಾನಕ್ಕೆ ಸಂಚರಿಸುವ ಮುಖ್ಯರಸ್ತೆ ಟೂರಿಸ್ಟ್ ಕಾರು ಪಾರ್ಕಿಂಗ್ ಬಳಿ ಹಿಂದೂ ಯುವ ಸೇನೆ ಬಂಟ್ವಾಳ ತಾಲೂಕು ಘಟಕ ಹಾಗೂ ದೈವಸ್ಥಾನದ ಆಡಳಿತ ಸಮಿತಿ ವತಿಯಿಂದ ನಿರ್ಮಿಸಲಾದ ಮಹಾದ್ವಾರದ ಲೋಕಾರ್ಪಣೆ ಮಂಗಳವಾರ ನೆರವೇರಿತು.
ದೈವಸ್ಥಾನದ ತಂತ್ರಿಗಳಾದ ಪೊಳಲಿ ಗಿರಿಪ್ರಕಾಶ್ ತಂತ್ರಿ ಉದ್ಘಾಟನೆ ನೆರವೇರಿಸಿ ಮಾತನಾಡಿ, ಮಹಾದ್ವಾರಕ್ಕೆ ವಿಶೇಷ ಮಹತ್ವ ಇದೆ. ಧರ್ಮ ದೈವಗಳ ಕ್ಷೇತ್ರಕ್ಕೆ ಬರುವಾಗ ಅಧರ್ಮವನ್ನು ಮೆಟ್ಟಿ ಧರ್ಮದ್ವಾರದ ಮೂಲಕ ಬರಬೇಕು ಎಂದರು.
ಹಿಂದೂ ಯುವ ಸೇನೆಯ ಕೇಂದ್ರೀಯ ಮಂಡಳಿಯ ಗೌರವಾಧ್ಯಕ್ಷ ಭಾಸ್ಕರಚಂದ್ರ ಶೆಟ್ಟಿ ಮಾತನಾಡಿ ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಇಂತಹ ಅನೇಕ ಕೊಡುಗೆಗಳನ್ನು ಹಿಂದೂ ಯುವ ಸೇನೆ ನೀಡುತ್ತಾ ಬಂದಿದೆ ಎಂದರು
ಜಿ.ಪಂ.ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಶುಭ ಹಾರೈಸಿದರು.ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ, ನಾಲ್ಕು ಮನೆತನದವರಾದ ವಿಶ್ವನಾಥ ಪೊಣ್ಣಂಗಿಲಗುತ್ತು,ಲೋಕೇಶ್ ಬಂಗೇರ ಗಾಣದಪಡ್ಪು, ಲೋಕನಾಥ ಬಡಕೊಟ್ಟು, ಸಂಜೀವ ಪೆಲತ್ತಿಮಾರು,ಹಿಂದೂ ಯುವ ಸೇನೆಯ ಕೇಂದ್ರೀಯ ಮಂಡಳಿಯ ಯಶೋಧರ ಚೌಟ, ಬಂಟ್ವಾಳ ಪುಷ್ಪಜ್ಯೋತಿ ಗ್ರೂಪ್ ನ ಮಾಲಕ ರವಿಚಂದ್ರ, ಉದ್ಯಮಿ ಶಶಿಕಿರಣ್ ತುಂಬೆ ಬಂಟ್ವಾಳ, ಹಿಂದೂ ಯುವ ಸೇನೆ ತಾಲೂಕು ಅಧ್ಯಕ್ಷ ವಸಂತಕುಮಾರ್ ಮಣಿಹಳ್ಳ , ಸ್ಥಳೀಯ ಪ್ರಮುಖರಾದ ಮಹಾಬಲ ಬಂಗೇರ, ಪ್ರದೀಪ್ ಶ್ರೀಹರಿ, ಹಿಂದೂ ಯುವ ಸೇನೆ ಪ್ರಮುಖರಾದ ಶಿವಪ್ರಸಾದ್ ಬಂಟ್ಚಾಳ, ಸುರೇಶ್ ಕೆಮ್ಮಟೆ, ಸಂತೋಷ್ ಕಬ್ಬಿನಹಿತ್ಲು, ನವೀನ್ ಕುಮಾರ್ ಮಣಿಹಳ್ಳ, ಮನೋಜ್ ಕಬ್ಬಿನ ಹಿತ್ಲು,ವಿಶ್ವನಾಥ ಕಬ್ಬಿನಹಿತ್ಲು,ಅಕ್ಷಿತ್ ಮುಗ್ಡಾಲ್ ಗುಡ್ಡೆ,,ಋಷಿಕೇಶ್ ಮಣಿಹಳ್ಳ ,ತಾರನಾಥ ಗೌಡ ಮಣಿ, ಕಿರಣ್ ಕುಮಾರ್,ಅನಿಲ್ ಕುಮಾರ್ ಮಂಡಾಡಿ, ಪ್ರೀತಂ ಮಂಡಾಡಿ ಮೊದಲಾದವರಿದ್ದರು. ಉಮಾಶಂಕರ ದಡ್ಡಲಕಾಡು ಸ್ವಾಗತಿಸಿ,ವಂದಿಸಿದರು. ಇದಕ್ಕೂ ಮುನ್ನ ಬಂಟ್ಚಾಳ ನಂದನಹಿತ್ಲು ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೈವಸ್ಥಾನದ ವರ್ಷಾವಧಿ ಉತ್ಸವದ ಪ್ರಯುಕ್ತ ಕೊಡಿಮರ ನಿಲ್ಲಿಸುವ ಕಾರ್ಯ ನಡೆಯಿತು.


Be the first to comment on "ನಂದನಹಿತ್ಲು: ಮಹಾದ್ವಾರ ಲೋಕಾರ್ಪಣೆ"