ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾರ್ಚ್ 31ರ ಮಂಗಳವಾರ ಬೆಳಗ್ಗೆ ಚಂಡಿಕಾಯಾಗ ಸಂಜೆ ಮಾತೃಸಂಗಮ ಕಾರ್ಯಕ್ರಮಗಳು ನಡೆಯಲಿವೆ.
ವಿವರಗಳು ಹೀಗಿವೆ:
ಬೆಳಗ್ಗೆ7ರಿಂದ ವೈದಿಕಕಾರ್ಯಕ್ರಮಗಳುಆರಂಭ, ಚಂಡಿಕಾಯಾಗ, ಮಧ್ಯಾಹ್ನಪೂಜೆ, ಸಂಜೆ5ರಿಂದಅಂಕುರಪೂಜೆ, ರಾತ್ರಿಪೂಜೆ, ಶ್ರೀದುರ್ಗಾಪೂಜೆ, ಅನುಜ್ಞಾಕಲಶಪೂರಣೆ, ಅಧಿವಾಸಹೋಮ ನಡೆಯಲಿದೆ. ಬೆಳಗ್ಗೆ8.30ರಿಂದ ಭಜನೆಕನ್ಯಾನ ಮತ್ತು ಕುರುಡಪದವು ತಂಡಗಳಿಂದ, ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ಶಿವಭಕ್ತವೀರಮಣಿ. ಮಧ್ಯಾಹ್ನ2.30ರಿಂದ ನಯನಗೌರಿ ಸೇರಾಜೆ ಮತ್ತು ಬಳಗದಸುಗಮಸಂಗೀತ ನಡೆಯಲಿದೆ.

ಸಂಜೆ4.30ರಿಂದಸುಧರ್ಮಸಭೆ, ಮಾತೃಸಂಗಮ ನಡೆಯಲಿದ್ದು, ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನಂನ ಸಾಧ್ವಿ ಶ್ರೀಮಾತಾನಂದಮಯಿ ಆಶೀರ್ವಚನ ನೀಡಲಿದ್ದಾರೆ. ಕರೋಪಾಡಿ ಗ್ರಾಪಂ ಅಧ್ಯಕ್ಷೆ ಸೂರ್ಯಕಾಂತಿ ದೀಪಪ್ರಜ್ವಲನ ಮಾಡುವರು. ಸುಳ್ಯಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸುವರು. ದೆಹಲಿಯವಾಗ್ಮಿ ಕಾಜಲ್ ಹಿಂದುಸ್ಥಾನಿ ಧಾರ್ಮಿಕ ಉಪನ್ಯಾಸನೀಡುವರು. ಕರ್ನಾಟಕ ಲೋಕಸೇವಾ ಆಯೋಗ ಸದಸ್ಯೆ ಬಿ.ವಿ.ಗೀತಾ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಹಿರಿಯ ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗೀಲ್, ಸುಮನಾ ಫೌಂಡೇಶನ್ ಅಧ್ಯಕ್ಷೆ ಡಾ. ಸುನೀತಾ ಮಂಜುನಾಥ್, ಪತ್ರಕರ್ತೆ ಶೋಭಾ ಮಳವಳ್ಳಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಜಿಪಂ ಮಾಜಿ ಅಧ್ಯಕ್ಷೆ ಶೈಲಜಾ ಭಟ್, ಯಮುನಾ ಬೋರ್ ವೆಲ್ಸ್ ಮಾಲಕಿ ಕಾವ್ಯ ಕೃಷ್ಣ ಶೆಟ್ಟಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿದ್ಯಾಗೌರಿ ಪುತ್ತೂರು, ಕನ್ಯಾನ ಗ್ರಾಪಂ ಅಧ್ಯಕ್ಷೆ ರೇಖಾ ರಮೇಶ್ ಪಂಜಾಜೆ ಅತಿಥಿಗಳಾಗಿರುವರು. ಬಳಿಕ ಸಂಜೆ 7ರಿಂದ ಪದಯಾನ ತಂಡದಿಂದ ನೃತ್ಯಾಂಜಲಿ ಪ್ರಣತಿ ಚೈತನ್ಯ ಪದ್ಯಾಣ ಮತ್ತು ಚೈತ್ರ ಈಶಾನ್ಯ ಪದ್ಯಾಣ ನಿರ್ದೇಶನದಲ್ಲಿ ಹಾಗೂ ಲಕ್ಷ್ಮೀ ಗುರುರಾಜ್ ತಂಡದಿಂದ ಶಿವಸಂಭೂತ ನೃತ್ಯ ನಾಟಕ ನಡೆಯಲಿದೆ.


Be the first to comment on "ಪದ್ಯಾಣದಲ್ಲಿ ನಾಳೆ ಚಂಡಿಕಾಯಾಗ, ಮಾತೃಸಂಗಮ"