
ಬ್ಯುಟಿಶಿಯನ್ ತರಬೇತಿ ಸಮಾರೋಪ ಕಾರ್ಯಕ್ರಮ ಬಂಟ್ವಾಳ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಮತ್ತು ಬಂಟ್ವಾಳ ,ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ಆಶ್ರಯದಲ್ಲಿ ಬಂಟ್ವಾಳದ ಉನ್ನತಿ ಸೌಧ ಸಭಾಂಗಣದಲ್ಲಿ ನಡೆಯಿತು.

ಉದ್ಘಾಟಿಸಿದ ಬಂಟ್ವಾಳ ವರ್ತಕರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಮಾತನಾಡಿ, ಬಹಳ ಬೇಡಿಕೆಯಾಗಿರುವ ವೃತ್ತಿಯಾಗಿರುವ ಬ್ಯೂಟಿಷಿಯನ್ ಕೋರ್ಸು ಮಹಿಳೆಯರ ಜೀವನ ರೂಪಿಸುತ್ತದೆ. ಪ್ರತಿಯೊಂದು ಮನೆಯಲ್ಲಿ ಮದುಮಗಳ ಶೃಂಗಾರ ಮಾಡುವ ಕಲೆ ತಿಳಿದಿರಬೇಕು ಎಂಬುದೇ ಕಾರ್ಯಕ್ರಮದ ಉದ್ದೇಶವಾಗಿದೆ. ಸ್ವಸ್ಥ ಸಮಾಜ ನಿರ್ಮಾಣ ಹಾಗೂ ಜೀವನೋಪಾಯಕ್ಕಾಗಿ ತರಬೇತಿ ಕಾರ್ಯಕ್ರಮ ಮೂಲಕ ಆರ್ಥಿಕವಾಗಿ ಸದೃಡವಾಗಿ ಮಾಡುವುದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯವಾಗಿದೆ ಎಂದರು.
ಕೇಂದ್ರ ಒಕ್ಕೂಟದ ಅಧ್ಯಕ್ಷ ಚಿದಾನಂದ ರೈ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಗಳು ಜನಪರವಾಗಿದೆ. ಸ್ವ ಉದ್ಯಮದ ಮೂಲಕ ಪ್ರತಿ ಮನೆಯನ್ನು ಆರ್ಥಿಕವಾಗಿ ಸದೃಡವಾಗಿ ಮಾಡುವುದೇ ಮುಖ್ಯ ಉದ್ದೇಶವಾಗಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್, ಉಡುಪಿ ಪ್ರಾದೇಶಿಕ ಆಡಳಿತ ಪ್ರಬಂಧಕ ಅಮರ್ ಪ್ರಸಾದ್ ಶೆಟ್ಟಿ ತರಬೇತಿದಾರರಾಗಿದ್ದ ಶೋಭಾ ಉಪಸ್ಥಿತರಿದ್ದರು.
ಬಂಟ್ವಾಳ ಯೋಜನಾಧಿಕಾರಿ ಜಯಾನಂದ ಸ್ವಾಗತಿಸಿ,ಜ್ಞಾನವಿಕಾಸ ಸಮನ್ವಯಾಧಿಕಾರಿ ಸವಿತಾ ವಂದಿಸಿದರು. ಕಚೇರಿ ಸಿಬ್ಬಂದಿ ಭಾರತಿ ಕಾರ್ಯಕ್ರಮ ನಿರೂಪಿಸಿದರು.


Be the first to comment on "ಮದುಮಗಳ ಶೃಂಗಾರ ಮಾಡುವ ಕಲೆ – ಬ್ಯುಟಿಶಿಯನ್ ತರಬೇತಿ ಕಾರ್ಯಕ್ರಮದ ಸಮಾರೋಪ"