ಪುರಸಭಾ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳ ಸಹಿತ ಸಮಸ್ಯೆಗಳ ಪರಿಹಾರದ ದೃಷ್ಟಿಯಿಂದ ಶೀಘ್ರವಾಗಿ ಅಧಿಕಾರಿಗಳ ಜೊತೆ ಸಭೆ ಕರೆಯುತ್ತೇನೆ ಎಂದು ಶಾಸಕ ರಾಜೇಶ್ ನಾಯ್ಕ್ ಹೇಳಿದ್ದಾರೆ.

ಅಮೃತ ನಗರೋತ್ಥಾನ ಯೋಜನೆಯಡಿ ದಕ್ಷಿಣ ಕನ್ನಡ .ಜಿಲ್ಲೆಯ ಬಂಟ್ವಾಳ ಪುರಸಭೆ ಅನುಮೋದನೆಯಾಗಿರುವ ಕ್ರಿಯಾಯೋಜನೆಯಲ್ಲಿ ವಿವಿಧ ಕಾಮಗಾರಿಗೆ ಬಿಡುಗಡೆಯಾದ 2 ಕೋಟಿ 56 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಶನಿವಾರ ಬಡ್ಡಕಟ್ಟೆ ನೇತ್ರಾವತಿ ನದಿ ಕಿನಾರೆಯಲ್ಲಿ ಗಿಡ ನೆಡುವ ಮೂಲಕ ಶಿಲಾನ್ಯಾಸ ನೆರವೇರಿಸಿದ ಬಳಿಕ ಅವರು ಮಾತನಾಡಿದರು.

ಒಳಚರಂಡಿ ಯೋಜನೆ (ಯುಜಿಡಿ) ಅನುಷ್ಠಾನಕ್ಕೆ ವೇಗ ಸಿಗಲಿದೆ. ಎರಡನೇ ಹಂತದ ಅಮೃತ್ ಯೋಜನೆಯಡಿ ಕುಡಿಯುವ ನೀರಿನ ಯೋಜನೆಗೆ ಅನುದಾನ ಬಿಡುಗಡೆಯಾಗಿದೆ ಎಂದರು.
ಬಂಟ್ವಾಳ ಕಸ್ಬಾ ಗ್ರಾಮದ ಬಡ್ಡಕಟ್ಟೆ ಹಿಂದು ರುದ್ರಭೂಮಿ ಅಭಿವೃದ್ಧಿ, ಉದ್ಯಾನವನ ನಿರ್ಮಾಣ ಅಭಿವೃದ್ಧಿಗೆ 57.59 ಲಕ್ಷ ರೂ, ಪುರಸಭೆಯ ಪ.ಜಾತಿ, ಖಾಯಂ ನೇರಪಾವತಿ ಪೌರಕಾರ್ಮಿಕರಿಗೆ ವಾಸಿಸಲು ವಸತಿ ಸಮುಚ್ಚಯ ನಿರ್ಮಾಣಕ್ಕೆ 29.77 ಲಕ್ಷ ರೂ, ಭಂಡಾರಿಬೆಟ್ಟು ಮೈರಾನ್ ಪಾದೆ ಪ.ಜಾತಿ ಸಮುದಾಯಭವನ ಅಭಿವೃದ್ಧಿ, ಗಾಂದೋಡಿ ಸಂಪರ್ಕ ಕಾಲುಸಂಕ ಮತ್ತು ರಸ್ತೆ ಅಭಿವೃದ್ಧಿ, ಬಿ.ಕಸ್ಬಾ ಗ್ರಾಮದ ಮುಗ್ದಾಲ್ ಪ್ರದೇಶದಲ್ಲಿ ಚರಂಡಿ ರಚನೆ, ಚಂಡ್ತಿಮಾರ್ ಸಮುದಾಯ ಭವನ ಅಭಿವೃದ್ಧಿಗೆ 71.46 ಲಕ್ಷ ರೂ, ಪಾಣೆಮಂಗಳೂರು ಗ್ರಾಮದ ಬೊಂಡಾಲ ಮಹಮ್ಮಾಯಿ ದೇವಸ್ಥಾನದ ರಸ್ತೆ ಅಭಿವೃದ್ಧಿ, ಬೊಂಡಾಲ ಕಲ್ಲಡ್ಕ ಗುಂಡೂರು ಸಂಪರ್ಕ ರಸ್ತೆ ಅಭಿವೃದ್ಧಿ, ಬಂಟ್ವಾಳ ಮೂಡ ಗ್ರಾಮದ ಚೆಂಡಾಡಿ ಅಲೆತ್ತೂರು ರಸ್ತೆ ಅಭಿವೃದ್ಧಿ ಹಾಗೂ ಕಸ್ಬಾ ಗ್ರಾಮದ ಅಗ್ರಾರ್ ರಸ್ತೆ ಬದಿ ತಡೆಗೋಡೆ ರಚನೆಗೆ 47.26 ಲಕ್ಷ ರೂ, ಬಿ.ಮೂಡ, ಬಿ.ಕಸ್ಬಾ, ಪಾಣೆಮಂಗಳೂರು ಗ್ರಾಮದ ವಿವಿಧ ಪ್ರದೇಶಗಳಿಗೆ ದಾರಿದೀಪ ವಿಸ್ತರಣೆ ಕಂಬಗಳ ಅಳವಡಿಕೆ ಹಾಗೂ ವಿವಿಧ ಕಡೆ ಸೆಮಿ ಹೈಮಾಸ್ಟ್ ಬೀದಿದೀಪ ಅಳವಡಿಕೆಗೆ 50 ಲಕ್ಷ ರೂ ನಿಗದಿಪಡಿಸಲಾಗಿದೆ
ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ಆರ್.ಚೆನ್ನಪ್ಪ ಕೋಟ್ಯಾನ್, ಹಿಂದೂ ರುದ್ರಭೂಮಿ ಸಮಿತಿ ಅಧ್ಯಕ್ಷ ಡಾ.ವಸಂತ ಬಾಳಿಗಾ, ಪುರಸಭಾ ಮಾಜಿ ಅಧ್ಯಕ್ಷ ದಿನೇಶ್ ಭಂಡಾರಿ, ಮಾಜಿ ಸದಸ್ಯರಾದ ಎ.ಗೋವಿಂದ ಪ್ರಭು, ಗಂಗಾಧರ ಪೂಜಾರಿ, ಶಶಿಕಲಾ, ದೇವಕಿ, ಮೀನಾಕ್ಷಿ ಗೌಡ, ಪ್ರಮುಖರಾದ ರಾಮದಾಸ್ ಬಂಟ್ವಾಳ, , ಕರುಣೇಂದ್ರ ಪೂಜಾರಿ, ಸುರೇಶ್ ಕುಲಾಲ್, ಜನಾರ್ದನ ಬೊಂಡಾಲ, ಮಚ್ಚೇಂದ್ರ ಸಾಲ್ಯಾನ್, ಅಜಯ್ ಕೋಂಬ್ರಬೈಲು, ವಿಶ್ವನಾಥ ಚಂಡ್ತಿಮಾರ್, ಪ್ರಕಾಶ ಅಂಚನ್, ವಸಂತಕುಮಾರ್ ಮಣಿಹಳ್ಳ, ರಮೇಶ್ ಭಂಡಾರಿ, ಜಯರಾಮ ರೈ ಬೋಳಂತೂರು, ಭಾಸ್ಕರ ಟೈಲರ್, ಪ್ರಣಾಮ್ ರಾಜ್ ಅಜ್ಜಿಬೆಟ್ಟು, ಸುರೇಶ್ ಕುಲಾಲ್, ವಸಂತ ಭಂಡಾರಿ, ಪುರಸಭಾ ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ ಮೊದಲಾದವರಿದ್ದರು. ಪುರಸಭಾ ಮಾಜಿ ಸದಸ್ಯ ಹರಿಪ್ರಸಾದ್ ಭಂಡಾರಿಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು.


Be the first to comment on "ಬಂಟ್ವಾಳ ಪುರಸಭೆ ಅಧಿಕಾರಿಗಳೊಂದಿಗೆ ಶೀಘ್ರ ಸಭೆ, ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಶಾಸಕ ರಾಜೇಶ್ ನಾಯ್ಕ್"