ಎ.ಎಸ್.ಆರ್ ಫೌಂಡೇಶನ್ ವತಿಯಿಂದ ದ.ಕ. ಜಿಲ್ಲಾ‌ ಮಟ್ಟದ ಆನ್ ಲೈನ್ ಖಿರಾಅತ್ ಸ್ಪರ್ಧೆ – Details

ಮರ್ಹೂಮ್ ಮಾಚಾರ್ ಅಬ್ದುಲ್ಲಾ ಹಾಗೂ ಮರ್ಹೂಮ್ ಎಸ್.ಎ.ಮೋನಬ್ಬ ಮಿತ್ತೂರು ಅವರ ಸ್ಮರಣಾರ್ಥ ದ.ಕ. ಜಿಲ್ಲಾ ಮಟ್ಟದ ಆನ್ ಲೈನ್ ಖಿರಾಅತ್ ಸ್ಪರ್ಧೆ-2026 ನಡೆಯಲಿದೆ. ಕಾರ್ಯಕ್ರಮವು ದಿನಾಂಕ 18-03-2026 ರತನಕ ಆನ್ ಲೈನ್ ಮೂಲಕ ನಡೆಯಲಿದ್ದು, ಇದರ ಪ್ರಾಯೋಜಕತ್ವವನ್ನು ಸೌದಿ ಅರೇಬಿಯಾ ಉದ್ಯಮಿ ಶೌಕತ್ ಅಲಿ ಬಂಟ್ವಾಳ ಹಾಗೂ ಎಸ್.ಎ.ರಹಿಮಾನ್ ಮಿತ್ತೂರು ಪ್ರಾಯೋಜಿಸಲಿದ್ದಾರೆ. ಆಶಿಕ್ ಕುಕ್ಕಾಜೆ ಹಾಗೂ ಶಫೀಕ್ ಕೌಸರಿ ಕುಕ್ಕಾಜೆ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಪ್ರಥಮ ಬಹುಮಾನ: ರೂ 11,111 ನಗದು ಹಾಗೂ ಪ್ರಶಸ್ತಿ ಪತ್ರ; ದ್ವಿತೀಯ ಬಹುಮಾನ ರೂ. 5555 ಹಾಗೂ ಪ್ರಶಸ್ತಿ ಪತ್ರ ಮೂರನೇ ಬಹುಮಾನ ರೂ 3333 ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಅಲ್ಲದೆ ಉತ್ತಮ ಸ್ಪರ್ಧಾರ್ಥಿಗಳಿಗೆ ಪ್ರಶಸ್ತಿ ಹಾಗೂ ಪ್ರಮಾಣ ಪತ್ರ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ನಿಯಮಗಳು
1️⃣ ಸ್ಪರ್ಧೆಯಲ್ಲಿ ಭಾಗವಹಿಸುವವರು 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಆಗಿರಬೇಕು.
2️⃣ ಸ್ಪರ್ಧಾರ್ಥಿಗಳು ಕುರ್‌ಆನ್‌ನ ಸೂರತುಲ್ ಬಕರದ 185 ರಿಂದ 187 ರವರೆಗೆ ಆಯತನ್ನು ಸರಿಯಾಗಿ ತಜ್ವೀದ್ (Tajweed) ನಿಯಮಗಳೊಂದಿಗೆ ಓದಬೇಕು.
3️⃣ ವಿಡಿಯೋವನ್ನು ಮೊಬೈಲ್‌ನಲ್ಲಿ ಸ್ಪಷ್ಟವಾಗಿ (Clear) ರೆಕಾರ್ಡ್ ಮಾಡಬೇಕು.
4️⃣ ವಿಡಿಯೋದಲ್ಲಿ ಸ್ಪರ್ಧಾರ್ಥಿಯ ಮುಖ ಸ್ಪಷ್ಟವಾಗಿ ಕಾಣಬೇಕು.
5️⃣ ವಿಡಿಯೋ 2 ರಿಂದ 3 ನಿಮಿಷಗಳೊಳಗೆ ಇರಬೇಕು.
6️⃣ ವಿಡಿಯೋದಲ್ಲಿ ಎಡಿಟ್, ಮ್ಯೂಸಿಕ್ ಅಥವಾ ಎಫೆಕ್ಟ್ಸ್ ಬಳಸಬಾರದು.
7️⃣ ಸ್ಪರ್ಧಾರ್ಥಿಗಳು ಶುದ್ಧ ಉಚ್ಚಾರಣೆ, ತಜ್ವೀದ್ ಮತ್ತು ಧ್ವನಿ ಸೌಂದರ್ಯ ಆಧಾರವಾಗಿ ಮೌಲ್ಯಮಾಪನ ಮಾಡಲಾಗುತ್ತದೆ.
8️⃣ ವಿಡಿಯೋವನ್ನು ದಿನಾಂಕ 18-03-2026 ರ ಒಳಗೆ +91 9591557448 ಗೆ ವಾಟ್ಸಾಪ್ ಮೂಲಕ ಕಳುಹಿಸಬೇಕು.
9️⃣ ಪ್ರತಿಯೊಬ್ಬ ಸ್ಪರ್ಧಾರ್ಥಿಯೂ ಒಂದು ಮಾತ್ರ ವಿಡಿಯೋ ಕಳುಹಿಸಬಹುದು.
🔟 ನಿರ್ಣಾಯಕರ ತೀರ್ಮಾನವೇ ಅಂತಿಮ ಆಗಿರುತ್ತದೆ.
1️⃣1️⃣ ದಕ್ಷಿಣ ಕನ್ನಡ ಜಿಲ್ಲೆಯವರಿಗೆ ಮಾತ್ರ ಅವಕಾಶ.

📌 ಕಳುಹಿಸುವಾಗ ಈ ವಿವರಗಳನ್ನು ಬರೆಯಬೇಕು:

ಜಾಹೀರಾತು
  • ಸ್ಪರ್ಧಾರ್ಥಿಯ ಹೆಸರು ಮತ್ತು ಪೂರ್ಣ ವಿಳಾಸ:
  • ವಯಸ್ಸು
  • ತಂದೆ ಮತ್ತು ತಾಯಿಯ ಹೆಸರು
  • ಮೊಬೈಲ್ ಸಂಖ್ಯೆ

🏆 ಉತ್ತಮ ಸ್ಪರ್ಧಾರ್ಥಿಗಳಿಗೆ ಪ್ರಶಸ್ತಿ ಹಾಗೂ ಪ್ರಮಾಣ ಪತ್ರ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ
ಆಶಿಕ್ ಕುಕ್ಕಾಜೆ +91 9591557448
ಶಫೀಕ್ ಕೌಸರಿ ಕುಕ್ಕಾಜೆ – +91 8495939365

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಎ.ಎಸ್.ಆರ್ ಫೌಂಡೇಶನ್ ವತಿಯಿಂದ ದ.ಕ. ಜಿಲ್ಲಾ‌ ಮಟ್ಟದ ಆನ್ ಲೈನ್ ಖಿರಾಅತ್ ಸ್ಪರ್ಧೆ – Details"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*