
ಶ್ರೀನಿವಾಸ್ ವಿಶ್ವವಿದ್ಯಾಲಯದ ಇನ್ಸಿಟಟ್ಯೂಟ್ ಆಫ್ ಕಂಪ್ಯೂಟರ್ ಸೈನ್ಸ್ ಆಂಡ್ ಇನ್ಫರ್ಮೇಶನ್ ಸೈನ್ಸ್ಸ್ ಸಂಸ್ಥೆಯಲ್ಲಿ “ನ್ಯೂರೋಸ್ಕೇಪ್ 2.0 – ಬಿಲ್ಡ್, ಟ್ರೈನ್, ಟ್ರಾನ್ಸ್ಫಾರ್ಮ್” ಎಂಬ ಶೀರ್ಷಿಕೆಯ ಅಡಿಯಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಪ್ರಾಜೆಕ್ಟ್ ಮಾದರಿಗಳ ಅನಾವರಣ ಹಾಗೂ ಪ್ರಾತ್ಯಕ್ಷತೆ ಆಯೋಜಿಸಲಾಗಿತ್ತು.

ಸಂಸ್ಥೆಯ ಡೀನ್ ಡಾ.ಸುಬ್ರಹ್ಮಣ್ಯ ಭಟ್ ಅವರು ಕಾರ್ಯಕ್ರಮ ಉದ್ಘಾಟಿಸಿ ಪ್ರಾಸ್ತಾವಿಕ ಭಾಷಣದಲ್ಲಿ, ಪ್ರಾಯೋಗಿಕ ಕಲಿಕೆಯು ವಿದ್ಯಾರ್ಥಿಗಳಿಗೆ ಅತ್ಯಂತ ಪರಿಣಾಮಕಾರಿಯಾದ ಕಲಿಕಾ ವಿಧಾನವಾಗಿದ್ದು, ವಿದ್ಯಾರ್ಥಿಗಳು ಆದಷ್ಟು ತಮ್ಮನ್ನು ತಾವು ಪ್ರಾಯೋಗಿಕ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕಾಗಿ ಕರೆನೀಡಿದರು.
ಬಿ.ಸಿ.ಎ ವಿದ್ಯಾರ್ಥಿಗಳ ಹನ್ನೊಂದು ತಂಡಗಳಿಂದ AI, ROBOTICS, IOT ಮತ್ತು Open Source Computing ತಂತ್ರಜ್ಞಾನ ಬಳಸಿ ಸಿದ್ದಪಡಿಸಿದ ವಿವಿಧ ಪ್ರಾಜೆಕ್ಟ್ ಮಾದರಿಗಳ ಮಾಹಿತಿ ಮತ್ತು ಪ್ರದರ್ಶನವನ್ನು ನಡೆಸಲಾಯಿತು.
ವೇದಿಕೆಯಲ್ಲಿ ಸಂಸ್ಥೆಯ ಬಿ.ಸಿ.ಎ ವಿಭಾಗದ ಮುಖ್ಯಸ್ಥರಾದ ಡಾ.ಶ್ರೀಧರ ಆಚಾರ್ಯ, ಎಂ.ಸಿ.ಎ ವಿಭಾಗದ ಮುಖ್ಯಸ್ಥರಾದ ಪ್ರೊ|ಸ್ವಾತಿ ಭಟ್ ಹಾಗೂ ಕಾರ್ಯಕ್ರಮ ಸಂಯೋಜಕರಾದ ಪ್ರೊ| ಐಶ್ವರ್ಯ ಎ.ಎಮ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಗೌಡ ಸಮೀಕ್ಷಾ ಮನೋಹರ್ ಮತ್ತು ರಿಯಾನ್ ಇಕ್ಬಾಲ್, ಸಂಕೀರ್ತನಾ ಬಿ ಕಾರ್ಯಕ್ರಮ ನಿರ್ವಹಿಸಿದರು. ದೇವಿಕಾ ಟಿ ಗಣ್ಯರನ್ನು ಸ್ವಾಗತಿಸಿದರೆ, ಮೋನಿಶಾ ಆರ್ ಧನ್ಯವಾದ ಸಲ್ಲಿಸಿದರು.


Be the first to comment on "ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಿ ನ್ಯೂರೋಸ್ಕೇಪ್ 2.0"