ಸಹಕಾರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುವುದರೊಂದಿಗೆ ಇತರ ಕ್ಷೇತ್ರಗಳಲ್ಲೂ ಸಹಕಾರ ಕ್ಷೇತ್ರವನ್ನು ಪಸರಿಸಿಕೊಂಡು ಎಲ್ಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಹಾಗೂ ವೈಯಕ್ತಿಕವಾಗಿಯೂ ಆರೋಗ್ಯ ಶಿಕ್ಷಣ,ಬೇರೆ ಬೇರೆ ರೀತಿಯಲ್ಲಿ ಸಲ್ಲಿಸಿದ ಸಮಾಜ ಸೇವೆ ಪರಿಗಣಿಸಿ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅವರನ್ನು ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್(ರಿ) ಪುಂಜಾಲಕಟ್ಟೆ ವತಿಯಿಂದ ಜರಗಿದ ಸಾಮೂಹಿಕ ವಿವಾಹ ಸಂದರ್ಭದಲ್ಲಿ ಕೊಡಮಾಡುವ ರಾಜ್ಯ ಮಟ್ಟದ ಸ್ವಸ್ತಿಕ್ ಸಂಭ್ರಮ ಪುರಸ್ಕಾರ 2026 ನೀಡಿ ಗೌರವಿಸಲಾಯಿತು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ರವಿಶಂಕರ್ ಶೆಟ್ಟಿ ಬಡಾಜೆಗುತ್ತು,ಸ್ವಸ್ತಿಕ್ ಪ್ರೆಂಡ್ಸ್ ಕ್ಲಬ್ ಸ್ಥಾಪಕಾಧ್ಯಕ್ಸ ಎಂ. ತುಂಗಪ್ಪ ಬಂಗೇರ, ಬಂಟ್ವಾಳ ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಬಿಜೆಪಿ ಮುಖಂಡರಾದ ಸಂದೇಶ ಶೆಟ್ಟಿ, ಪ್ರಮುಖರಾದ ಹರೀಂದ್ರ ಪೈ, ವಾಲ್ಟರ್ ನಂದಳಿಕೆ, ಕಿರಣ್ ಚಂದ್ರ ಪುಷ್ಪಗಿರಿ, ಜಗನ್ನಾಥ ಶೆಟ್ಟಿ, ಪುನೀತ್ ಕುಮಾರ್, ಶಾರದಾ, ಗೀತಾ ಹೆಗ್ಡೆ, ಅಬ್ದುಲ್ ಹಮೀದ್,ಮೋಹನ್ ಶೆಟ್ಟಿ, ಹೇಮಂತ್ ಕುಮಾರ್, ಸತೀಶ್ ಬಂಗೇರ, ಚಂದ್ರಶೇಖರ ಶೆಟ್ಟಿಗಾರ್,ಮಾದವ ಬಂಗೇರ, ಅಬ್ದುಲ್ಲಾ ಪಿ, ಜಯರಾಮ, ರತ್ನಾಕರ, ಶಾಜಿ ಹುಸೈನ್, ಧನ್ ರಾಜ್, ರಫಿಕ್ ಮತ್ತಿತರರು ಉಪಸ್ಥಿತರಿದ್ದರು. ಪ್ರಭಾಕರ ಸ್ವಾಗತಿಸಿ ರಾಜೇಶ್ ಬಂಗೇರ ವಂದಿಸಿದರು.




Be the first to comment on "ಪ್ರಭಾಕರ ಪ್ರಭು ಅವರಿಗೆ ರಾಜ್ಯ ಮಟ್ಟದ ಸ್ವಸ್ತಿಕ್ ಸಂಭ್ರಮ 2026 ಪುರಸ್ಕಾರ"