ಸಂಜೆಯಾಗುತ್ತಲೇ ಇದು ‘ಬ್ಯುಸಿ’ ರೋಡ್ | ಹೆದ್ದಾರಿಯಲ್ಲೇ ವಾಹನಗಳ ನಿಲುಗಡೆ | ಫುಟ್ ಪಾತ್ ಕಾಣಿಸುವುದೇ ಇಲ್ಲ | ಸಂಚಾರಕ್ಕೆ ಅಡಚಣೆ

ಮಧ್ಯಾಹ್ನ ಕಳೆದು ಸಂಜೆ ಸುಮಾರು 4 ಗಂಟೆಯಾಗುತ್ತಲೇ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಬಿ.ಸಿ.ರೋಡ್  ಬ್ಯುಸಿ ರೋಡ್ ಆಗಿ ಬದಲಾಗುತ್ತದೆ. ದಿಢೀರನೆ ವಾಹನಗಳು ಹೆಚ್ಚು ಕಾಣಿಸಿಕೊಂಡು ಸಂಚಾರದಟ್ಟಣೆ ಉಂಟಾಗುತ್ತದೆ. ಯಾಕೆ ಹೀಗಾಗುತ್ತದೆ ಎಂಬುದಕ್ಕೆ ಅಲ್ಲೇ ಉತ್ತರವಿದೆ. ಪರಿಹರಿಸುವವರಿಗೆ ಸಮಯಾವಕಾಶ ಇನ್ನೂ ಸಿಕ್ಕಿಲ್ಲ.

ಸಂಜೆಯಿಂದ ರಾತ್ರಿಯವರೆಗಿನ ಅವಧಿ ಅಂದರೆ ಸುಮಾರು 4ರಿಂದ 7.30ರವರೆಗಿನ ಸಮಯ ವಾಹನಗಳು ವೇಗವಾಗಿ ಸಂಚರಿಸಲು ಆಗದಂಥ ಸ್ಥಿತಿ ನಿರ್ಮಾಣವಾಗುತ್ತದೆ. ಮಂಗಳೂರು ಕಡೆಯಿಂದ ಆಗಮಿಸುವ ವಾಹನಗಳು ನಗರದ ಮೂಲಕ ಹಾದುಹೋಗಲೇಬೇಕಾದ ಅನಿವಾರ್ಯತೆ ಒಂದೆಡೆಯಾದರೆ, ಅಲ್ಲಿ ಹೋಗಲು ಆಗದಂಥ ಪರಿಸ್ಥಿತಿ ಇನ್ನೊಂದೆಡೆ ನಿರ್ಮಾಣವಾಗಿದೆ.  ಬೆಂಗಳೂರು ಭಾಗದಿಂದ ಮಂಗಳೂರು ಕಡೆ ತೆರಳುವ ವಾಹನಗಳಿಗೆ ಫ್ಲೈಓವರ್ ಸಂಚಾರದ ಜತೆ ಸರ್ವೀಸ್ ರಸ್ತೆಯೂ ಇರುವ ಕಾರಣ ದೊಡ್ಡ ಸಮಸ್ಯೆ ಇಲ್ಲ. ಆದರೆ ಬಿ.ಸಿ.ರೋಡ್ ಪೇಟೆಯಲ್ಲಿ ಹೆದ್ದಾರಿ ಬದಿಯಲ್ಲಿರುವ ಯಾವುದೇ ಕಟ್ಟಡಗಳಿಗೆ ಸ್ವಂತ ಪಾರ್ಕಿಂಗ್ ವ್ಯವಸ್ಥೆಗಳು ಇಲ್ಲದೇ ಇರುವ ಕಾರಣ, ಅಂಗಡಿ, ಮುಂಗಟ್ಟುಗಳಿಗೆ ವ್ಯವಹಾರಕ್ಕೆಂದು ಬರುವವರು ಹೆದ್ದಾರಿಗೆ ತಾಗಿಕೊಂಡೇ ವಾಹನ ನಿಲ್ಲಿಸುತ್ತಾರೆ. ಕಾರ್ ನಂಥ ವಾಹನಗಳು ರಿವರ್ಸ್ ತೆಗೆಯುವ ಹೊತ್ತಿಗೆ ವಾಹನಗಳ ಸಾಲು ಉದ್ದವಾಗುತ್ತಾ ಹೋಗುತ್ತದೆ.

ಪ್ರತಿ ಬಾರಿ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಗಳಲ್ಲಿ ಪಾರ್ಕಿಂಗ್ ನಂಥ ವಿಷಯಗಳು ಪ್ರಸ್ತಾಪವಾಗಿ ಬಳಿಕ ವಿಷಯಾಂತರವೋ ಅಥವಾ ತಾರ್ಕಿಕ ಅಂತ್ಯ ಕಾಣದೆ ಮುಗಿಯುವುದುಂಟು. ರಸ್ತೆಯಲ್ಲೇ ಬಸ್ ನಿಲ್ಲುವುದು ಶಾಶ್ವತ ಸಮಸ್ಯೆಯಾಗುತ್ತಿದೆಯೋ ಎಂಬ ಭೀತಿ ಬಿ.ಸಿ.ರೋಡಿನ ಜನರದ್ದು. ಮಂಗಳೂರಿನಿಂದ ಬೆಂಗಳೂರು, ಮೈಸೂರು, ಮಡಿಕೇರಿ, ಪುತ್ತೂರು, ಉಪ್ಪಿನಂಗಡಿ, ಧರ್ಮಸ್ಥಳ, ವಿಟ್ಲ ಭಾಗಗಳಿಗೆ ತೆರಳುವ ಸರಕಾರಿ ಮತ್ತು ಖಾಸಗಿ ಬಸ್ಸುಗಳು ಬಿ.ಸಿ.ರೋಡಿನಲ್ಲಿ ಪ್ರಯಾಣಿಕರನ್ನು ಹತ್ತಿಸಲು ಹಾಗೂ ಇಳಿಸಲು ಹೆದ್ದಾರಿಯನ್ನೇ ಆಶ್ರಯಿಸಿವೆ. ಮಾರ್ಗದಲ್ಲೇ ಬಸ್ ನಿಲ್ದಾಣವಾದ ಕಾರಣ ಸಂಜೆಯ ಹೊತ್ತು ಇಲ್ಲಿ ಬ್ಲಾಕ್ ಆಗುತ್ತದೆ. ನಾಲ್ಕೈದು ಬಸ್ ನಿಂತರೆ ಮತ್ತೆ ಟ್ರಾಫಿಕ್ ಜಾಮ್

ಜಾಹೀರಾತು
ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಸಂಜೆಯಾಗುತ್ತಲೇ ಇದು ‘ಬ್ಯುಸಿ’ ರೋಡ್ | ಹೆದ್ದಾರಿಯಲ್ಲೇ ವಾಹನಗಳ ನಿಲುಗಡೆ | ಫುಟ್ ಪಾತ್ ಕಾಣಿಸುವುದೇ ಇಲ್ಲ | ಸಂಚಾರಕ್ಕೆ ಅಡಚಣೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*