ಗೌಡ ಸಾರಸ್ವತ ಸಮಾಜದ ಆಡಳಿತಕ್ಕೊಳಪಟ್ಟ ಬಂಟ್ವಾಳದ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ 202ನೇ ವರ್ಷದ ಬ್ರಹ್ಮರಥೋತ್ಸವ ಕಾರ್ಯಕ್ರಮಗಳು ಫೆಬ್ರವರಿ 20ರಿಂದ 25ರವರೆಗೆ ನಡೆಯಲಿದೆ.

ವಿಶ್ವಾವಸು ನಾಮ ಸಂವತ್ಸರದ ಫಾಲ್ಗುಣ ಶುದ್ಧ ತದಿಗೆ ಫೆ.20ರ ಶುಕ್ರವಾರದಿಂದ ಫಾಲ್ಗುಣ ಶುದ್ಧ ನವಮಿ ಫೆ.25 ಬುಧವಾರದವರೆಗೆ ನಡೆಯುವ 202ನೇ ವರ್ಷದ ಬ್ರಹ್ಮರಥೋತ್ಸವ ಹಿನ್ನೆಲೆ ಬುಧವಾರ ಶ್ರೀದೇವರ ಬ್ರಹ್ಮರಥವನ್ನು ಹೊರಗೆ ತೆಗೆಯಲಾಯಿತು.

ಗುರುವಾರ ಶ್ರೀ ದೇವರ ಮೃತ್ತಿಕಾರೋಹಣ, 20ರಂದು ಶುಕ್ರವಾರ, ಧ್ವಜಾರೋಹಣ , ಬೆಳ್ಳಿ ಪಾಲ್ಕಿ ಹಗಲೋತ್ಸವ, ಗರುಡೋತ್ಸವ ನಡೆಯಲಿದೆ. 21ರಂದು ಶನಿವಾರ, ಬೆಳ್ಳಿ ಪಾಲ್ಕಿ ಹಗಲೋತ್ಸವ, ಹನುಮಂತೋತ್ಸವ, 22ರಂದು ಭಾನುವಾರ ಬೆಳ್ಳಿ ಲಾಲ್ಕಿ ಹಗಲೋತ್ಸವ, ಚಂದ್ರಮಂಡಲ ಉತ್ಸವ, 23ರಂದು ಸೋಮವಾರ, ಶ್ರೀ ದೇವರ ಮೂಲ ಪ್ರತಿಷ್ಠಾ ವರ್ದಂತಿ, ಪಟ್ಟದ ದೇವರಿಗೆ ಸ್ವರ್ಣ ಪೀಠ ಸಮರ್ಪಣೆ, ಬೆಳ್ಳಿ ಪಾಲ್ಕಿ ಹಗಲೋತ್ಸವ, ಜಲಕ್ರೀಡೆ, ಗೋಪುರೋತ್ಸವ, ಬೆಳ್ಳಿ ಲಾಲ್ಕಿ ಉತ್ಸವ, ಬೆಳ್ಳಿ ರಥೋತ್ಸವ, 24ರಂದು ಮಂಗಳವಾರ ಬ್ರಹ್ಮ ರಥೋತ್ಸವ ನಡೆಯಲಿದೆ. 25ರ ಬುಧವಾರ ಅವಭೃತ ಉತ್ಸವ, ಧ್ವಜಾವರೋಹಣ ನಡೆಯಲಿದೆ ಎಂದು ಶ್ರೀದೇವಳ ಪ್ರಕಟಣೆ ತಿಳಿಸಿದೆ.


Be the first to comment on "ಬಂಟ್ವಾಳ: ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ 20ರಿಂದ 25ವರೆಗೆ ಬ್ರಹ್ಮರಥೋತ್ಸವ ಕಾರ್ಯಕ್ರಮ"