ಆನೆಕಲ್ಲು: ಕೇರಳ ಕರ್ನಾಟಕ ಗಡಿ ಭಾಗವಾದ ಆನೆಕಲ್ಲಿನಲ್ಲಿ 37 ವರ್ಷಗಳ ಇತಿಹಾಸವಿರುವ ಶ್ರೀ ಓಂಕಾರ ಭಜನಾ ಮಂಡಳಿ ನೂತನ ಮಂದಿರದ ಕಟ್ಟಡಕ್ಕೆ ಎಡನೀರು ಮಠದ ಪೀಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಹಾಗೂ ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಶಿಲಾನ್ಯಾಸ ನೆರವೇರಿಸಿದರು.

ವೇದಮೂರ್ತಿ ಬೋಳಂತಕೋಡಿ ರಾಮ ಭಟ್ ಹಾಗೂ ಗೋಪಾಲಕೃಷ್ಣ ಭಟ್ ಕಳಾಯಿ ವೈದಿಕ ವಿಧಿ ವಿಧಾನ ನೆರವೇರಿಸಿಕೊಟ್ಟರು. ಹಿರಿಯ ವಕೀಲರು ಹಾಗೂ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಓ. ಶಾಮ್ ಭಟ್ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದಲ್ಲಿ ಎಡನೀರು ಶ್ರೀಗಳು ಹಾಗೂ ಒಡಿಯೂರು ಶ್ರೀಗಳು ಆಶೀರ್ವಚನವನ್ನಿತ್ತು ಶುಭ ಹಾರೈಸಿದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ, ನಿವೃತ್ತ ಅಂಚೆಪಾಲಕ ರಾಮ ನಾಯ್ಕ್ ಕುಕ್ಕಿನಾರ್ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಬೋಳಂತಕೋಡಿ ರಾಮ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು. ಎ ಯು ಪಿ ಶಾಲೆ ಆನೆಕಲ್ಲಿನ ಶಿಕ್ಷಕರಾದ ರವಿಶಂಕರ್ ಎಸ್ ಸಮಾಜಕ್ಕೆ ಭಜನಾ ಮಂದಿರದ ಅವಶ್ಯಕತೆಯ ಬಗ್ಗೆ ಮಾತನಾಡಿದರು. ಭಾರತ ಸೇವಾಶ್ರಮ ಕನ್ಯಾನ ಕಾರ್ಯದರ್ಶಿ ಈಶ್ವರ ಭಟ್ ಎಸ್ ಇಂದಿನ ದಿನದಲ್ಲಿ ಮಂದಿರದ ಅವಶ್ಯಕತೆ ಬಗ್ಗೆ ತಿಳಿಸಿದರು. ಸುಬ್ರಾಯ ನಂದೋಡಿ ಸುಸ್ಥಿರ ಸಂಘಟನೆ ಅವಶ್ಯಕತೆ ಹಾಗೂ ಅದನ್ನು ರೂಪಿಸುವ ಬಗ್ಗೆ ತಿಳಿಹೇಳಿದರು.

ಸ್ಥಾಪಕ ಕಾರ್ಯದರ್ಶಿ ಸದಾಶಿವ್ ಭಟ್ ಆನೆಕಲ್ಲು, ಛತ್ರ ಸಂತಾನ ಗೋಪಾಲಕೃಷ್ಣ ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ, ಕೃಷ್ಣ ನಾಯ್ಕ್ ಸೊಡಂಕೂರು, ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಪ್ರಬಂಧಕರು ಶ್ರೀನಿವಾಸ್ ನಾಯ್ಕ್ ಆನೆಕಲ್ಲು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರಮೇಶ್ ಉಪಸ್ಥಿತರಿದ್ದರು. ಸುನೀತಾ ಮತ್ತು ಬಳಗ ಪ್ರಾರ್ಥನೆ ನೆರವೇರಿಸಿದರು. ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ನಾರಾಯಣ ಶೆಟ್ಟಿಗಾರ್ ಬಪ್ಪಾಯಿಮೂಲೆ ಸ್ವಾಗತಿಸಿ, ಮಂದಿರದ ಕಾರ್ಯದರ್ಶಿ ಹಾಗೂ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ರಾಮಕೃಷ್ಣ ಭಟ್ ಸೊಡಂಕೂರು ಪ್ರಾಸ್ತಾವಿಕ ಭಾಷಣ ಮಾಡಿದರು. ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಸತ್ಯಪ್ರಕಾಶ್ ಆನೆಕಲ್ಲು ವಂದಿಸಿದರು. ಕಿಶೋರ್ ಮಾಸ್ಟರ್ ಆನೆಕಲ್ಲು ಹಾಗೂ ನಾರಾಯಣ ಭಟ್ ಆನೆಕಲ್ಲು ಕಾರ್ಯಕ್ರಮ ನಿರೂಪಿಸಿದರು.


Be the first to comment on "ಶ್ರೀ ಓಂಕಾರ ಭಜನಾ ಮಂಡಳಿ ಆನೆಕಲ್ಲು: ನೂತನ ಕಟ್ಟಡಕ್ಕೆ ಶಿಲಾನ್ಯಾಸ"