ಜೀವನದ ಪ್ರತೀ ಕ್ಷಣದಲ್ಲಿ ಮಹಿಳೆಯರು ಸಂತೋಷ-ಸಂತಸಪಡೆಯುವ ಸನ್ನಿವೇಶಗಳು ಸಮಾಜದಲ್ಲಿ ನಿರ್ಮಾಣಗೊಳ್ಳಲಿ ಎಂದು ಹಿರಿಯ ವಕೀಲರಾದ ಅಶ್ವನಿಕುಮಾರ್ ರೈ ಹೇಳಿದರು.

ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾಸಂಸ್ಥೆ ಮತ್ತು ಜವಾಹರ್ ಬಾಲ್‌ಮಂಚ್ ಮಂಗಳೂರು ಇದರ ಆಶ್ರಯದಲ್ಲಿ ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಸಂಭ್ರಮೋತ್ಸವದಲ್ಲಿಭಾಗವಹಿಸಿ ಮಾತನಾಡಿದರು.
ಮಹಿಳೆಯರು ಸಾಮಾಜಿಕವಾಗಿಹೆಚ್ಚು ತೊಡಗಿಸಿಕೊಳ್ಳುವಂತಹ ಅವಕಾಶಗಳು ಒದಗಿಬರಲಿ ಎಂದ ಅವರು, ಇಂತಹಾ ಕಾರ್ಯಕ್ರಮಗಳು ಹೆಚ್ಚುಹೆಚ್ಚು ನಡೆಯಲಿ ಎಂದರು. ಮಾಜಿ ಸಚಿವ ಬಿ.ರಮಾನಾಥ ರೈ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಚಿತ್ತರಂಜನ್ ಬೋಳಾರ್, ಉದ್ಯಮಿ ಶೈಲೇಂದ್ರ ,ಅಬ್ಬಾಸ್ ಅಲಿ, ಬೂಡ ಅಧ್ಯಕ್ಷ ಬೇಬಿ ಕುಂದರ್, ಪ್ರಮುಖರಾದ ಪಿಯೂಸ್ ಎಲ್ ರೋಡ್ರಿಗಸ್, ಡಾ.ಶಶಿಕಲಾ ಆರ್ ಸೋಮಯಾಜಿ , ಸಂಗೀತಾ ಶರ್ಮ, ಡಾ.ಸಂಶದ್ ಕುಂಜತ್ತ್ ಬೈಲ್, ಪ್ರಭಾ ನಾರಾಯಣ ಸುವರ್ಣ, ಜವಾಹರ್ ಬಾಲ್ ಮಂಚ್ ರಾಜ್ಯಾಧ್ಯಕ್ಷ ಶೌರ್ಯ, ಪ್ರಕಾಶ್ ಕೆರ್ವಾಸೆ, ಕೃಷ್ಣ ಸುವರ್ಣ, ಬಾಲಕೃಷ್ಣ ಅಂಚನ್, ರಾಜೇಶ್ ಪೂಜಾರಿ ವೇದಿಕೆಯಲ್ಲಿದ್ದರು.
ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಸಂಶೋಧನಾ ಸಂಸ್ಥೆಯ ಸಂಸ್ಥಾಪಕಿ ಶೈಲಜಾ ರಾಜೇಶ್, ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.ಯತೀಶ್ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಇದೇ ಸಂಧರ್ಭ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಸಂಶೋಧನಾ ಸಂಸ್ಥೆಯಿಂದ ಅರಿವಳಿಕೆ ತಜ್ಞೆ ಡಾ. ಶಶಿಕಲಾ ಆರ್ ಸೋಮಾಯಾಜಿ, ಸಮಾಜಸೇವಕಿ ಸುಜಿತಾ ವಿ.ಬಂಗೇರ, ಶಿಕ್ಷಕಿ ಸಂಗೀತಾ ಶರ್ಮ, ಸಮಾಜ ಸೇವಕಿ ಡಾ. ಸಂಸದ್ ಕುಂಜತ್ ಬೈಲ್, ಸಮಾಜಸೇವಕಿ
ಪ್ರಭಾ ನಾರಾಯಣ ಸುವರ್ಣ ಅವರನ್ನು ಸನ್ಮಾನಿಸಲಾಯಿತು. ಮಹಿಳೆಯರು ಮತ್ತು ಮಕ್ಕಳಿಗಾಗಿವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.


Be the first to comment on "ಬಂಟ್ವಾಳದಲ್ಲಿ ಮಹಿಳಾ ಮತ್ತು ಮಕ್ಕಳ ಸಂಭ್ರಮೋತ್ಸವ"