ಬಂಟ್ವಾಳ: ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಅಧ್ಯಕ್ಷರಾಗಿ ಸಂಕಪ್ಪ ಶೆಟ್ಟಿ ಸಂಚಯಗಿರಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ನಾರಾಯಣ ಪೂಜಾರಿ ಎಸ್.ಕೆ. ಆಯ್ಕೆಯಾಗಿದ್ದಾರೆ.

ನೂತನ ಪದಾಧಿಕಾರಿಗಳ ಆಯ್ಕೆ ಅಧ್ಯಕ್ಷರಾದ ಪಿ .ಲೋಕನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಮಿತಿಯ ನೂತನ ಅಧ್ಯಕ್ಷರಾಗಿ ಸಂಕಪ್ಪ ಶೆಟ್ಟಿ, ಉಪಾಧ್ಯಕ್ಷರಾಗಿ ಕೆ.ನೀಲೋಜಿ ರಾವ್, ಟಿ.ಶೇಷಪ್ಪ ಮಾಸ್ಟರ್, ಪ್ರಧಾನ ಕಾರ್ಯದರ್ಶಿಯಾಗಿ ನಾರಾಯಣ ಪೂಜಾರಿ ಎಸ್ ಕೆ, ಜತೆ ಕಾರ್ಯದರ್ಶಿಯಾಗಿ ನಾರಾಯಣ ಎಂ, ಖಜಾಂಚಿಯಾಗಿ ಜಲಜಾಕ್ಷಿ ಕುಲಾಲ್, ಸಂಘಟನಾ ಕಾರ್ಯದರ್ಶಿಗಳಾಗಿ ಜಯರಾಮ ಪೂಜಾರಿ, ಆನಂದ ನಾಯ್ಕ್, ಜಯಂತ ಶೆಟ್ಟಿ, ಆಂತರಿಕ ಲೆಕ್ಕ ಪರಿಶೋಧಕರಾಗಿ ಪದ್ಮನಾಭ.ಎಂ ಸದಸ್ಯರುಗಳಾಗಿ ಸೋಮಪ್ಪ ಬಂಗೇರ, ಬಾಬು ಮಾಸ್ಟರ್, ಮಧುಕರ ಮಲ್ಯ, ಕೃಷ್ಣಪ್ಪ, ರಾಮಚಂದ್ರ ರಾವ್, ಜಯಾನಂದ ಪೆರಾಜೆ, ಚಂದ್ರಶೇಖರ ಗಟ್ಟಿ, ಲೋಕನಾಥ ಶೆಟ್ಟಿ, ಸುಧಾ ಜೋಶಿ, ರಾಘವನ್ ನಾಯರ್ ಅವನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿ ನೀಲೋಜಿ ರಾವ್ ಸ್ವಾಗತಿಸಿ ಮಹಾಸಭೆ ವರದಿ ವಾಚಿಸಿದರು .ಖಜಾಂಚಿ ಜಲಜಾಕ್ಷಿ ಕುಲಾಲ್ ಲೆಕ್ಕಪತ್ರ ಮಂಡಿಸಿದರು .ನೂತನ ಕಾರ್ಯದರ್ಶಿ ನಾರಾಯಣ ಪೂಜಾರಿ ಎಸ್.ಕೆ ವಂದಿಸಿದರು.


Be the first to comment on "ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘದ ಅಧ್ಯಕ್ಷರಾಗಿ ಸಂಕಪ್ಪ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ನಾರಾಯಣ ಪೂಜಾರಿ ಆಯ್ಕೆ"