
ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನ ಸಂಸ್ಥೆ ( ರಿ.) ಬಾಳ್ತಿಲ ಮತ್ತು ಜವಾಹರ್ ಬಾಲ್ ಮಂಚ್ ದ.ಕ. ಸಂಯುಕ್ತ ಆಶ್ರಯದಲ್ಲಿ ಮಹಿಳಾ ಮತ್ತು ಮಕ್ಕಳ ಸಂಭ್ರಮೋತ್ಸವ ಫೆ.3 ರಂದು ಮಂಗಳವಾರ ಬಿಸಿರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಸಂಸ್ಥಾಪಕಿ ,ನ್ಯಾಯವಾದಿ ಶೈಲಜಾ ರಾಜೇಶ್ ಹೇಳಿದ್ದಾರೆ.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವೆ ಲಕ್ಮೀ ಹೆಬ್ಬಾಳ್ಕರ್, ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇಡೀ ದಿನ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿವೆ. ಸೀತಾರಾಮ ಮುದ್ದುಕೃಷ್ಣ ಛದ್ಮವೇಷ ಸ್ಪರ್ಧೆ (10 -3 ವರ್ಷ, 3ರಿಂದ 6 ವರ್ಷ,6 ರಿಂದ 10 ವರ್ಷ , 10 ರಿಂದ 18 ವರ್ಷದವರೆಗೆ) ಮೆಹಂದಿ ಸ್ಪರ್ಧೆ (10 ವರ್ಷದಿಂದ ಮೇಲ್ಪಟ್ಟ ಮಕ್ಕಳು ಮತ್ತು ಮಹಿಳೆಯರಿಗೆ ಮೆಹಂದಿ ಟ್ಯೂಬ್ ಮತ್ತು ಜೊತೆಗಾರರನ್ನು ಕರೆತಕ್ಕದ್ದು) ಬೆಂಕಿ ಬಳಸದೆ ಅಡುಗೆ ಸ್ಪರ್ಧೆ (10 ವರ್ಷದಿಂದ ಮೇಲ್ಪಟ್ಟ ಮಕ್ಕಳು ಮತ್ತು ಮಹಿಳೆಯರಿಗೆ )( ಸಾಮಾಗ್ರಿಗಳನ್ನು ತರತಕ್ಕದ್ದು ಬೇಯಿಸಿದ ಆಹಾರ ಬಳಸುವಂತಿಲ್ಲ. ಚಿತ್ರಕಲಾ ಸ್ಪರ್ಧೆ [5 ವರ್ಷದಿಂದ 18 ವರ್ಷದವರೆಗೆ) 5-10 ವರ್ಷ ಪರಿಸರ, 10-15 ವರ್ಷದವರಿಗೆ ನನ್ನ ಕನಸಿನ ಭಾರತ ವಿಷಯವಾಗಿರುತ್ತದೆ. 15-18 ವರ್ಷ ಮಹಾತ್ಮ ಗಾಂಧೀಜಿ, ಮಾದಕ ವ್ಯಸನ ಮುಕ್ತ ಭಾರತ ವಿಷಯವಾಗಿದೆ ನೃತ್ಯ ಸ್ಪರ್ಧೆ (ಜಾನಪದ ನೃತ್ಯ ಕನಿಷ್ಠ 3 ಜನರಿರಬೇಕು), ಸ್ವಾದಿಷ್ಟ ಸವಿರುಚಿ, ತಾವೇ ಮನೆಯಲ್ಲಿ ತಯಾರಿಸಿದ ಪೌಷ್ಠಿಕ ಸ್ವಾದಿಷ್ಟ ಆರೋಗ್ಯಭರಿತ, ರುಚಿಯಾದ ಅಡುಗೆ ಮಾಡಲು ಮಹಿಳೆಯರಿಗೊಂದು ಸುವರ್ಣ ಅವಕಾಶ ಹಾಗೂ ಬಹುಮಾನ ಕೂಡ ನೀಡಲಾಗುತ್ತದೆ ಎಂದರು.
ಅದಲ್ಲದೆ, ಭಾರತದ ಮೊದಲ ಮಹಿಳಾ ಪ್ರಧಾನಿಯಾಗಿ ಮಹಿಳೆಯ ಶಕ್ತಿಯಾಗಿ ಮೂಡಿಬಂದ ಇಂದಿರಾ ಗಾಂಧಿ ವಿಚಾರದ ಕುರಿತು ಸಂವಾದ ಕಾರ್ಯಕ್ರಮ ನಡೆಯಲಿದೆ. ಸಮಾಜದಲ್ಲಿ ಮಕ್ಕಳು ಮತ್ತು ಮಹಿಳೆಯರ ಪಾತ್ರ, ಕಾನೂನು ಸುವ್ಯವಸ್ಥೆ, ಕುಟುಂಬ ಪ್ರೀತಿ -ಸಂಸ್ಕಾರ ಮಹತ್ವ ಮತ್ತು ಮಾಧಕ ವ್ಯಸನ ಮುಕ್ತ ಭಾರತ, ಕ್ಯಾನ್ಸರ್ ಪೀಡಿತ ವಿಕಲಚೇತನರಿಗೆ ಧನ ಸಹಾಯ ಕಾರ್ಯಕ್ರಮ, ನಡೆಯಲಿದೆ ಎಂದರು.
ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಸಂಶೋಧನಾ ಸಂಸ್ಥೆಯಿಂದ ಸಾಧಕ ಮಹಿಳೆಯರಿಗೆ ಗಿರಿಜಾ ರತ್ನ ರಾಜ್ಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ. ಈ ಪ್ರಶಸ್ತಿಗೆ ಡಾ| ಶಶಿಕಲಾ ಆರ್ ಸೋಮಾಯಾಜಿ, ಅರಿವಳಿಕೆ ತಜ್ಞರು, ಸುಜಿತಾ ವಿ.ಬಂಗೇರ, ಸಮಾಜ ಸೇವಕಿ, ಸಂಗೀತಾ, ಶಿಕ್ಷಕಿ ವೀರಕಂಭ ಮಜಿ ಶಾಲೆ, ಡಾ. ಸಂಸದ್ ಕುಂಜತ್ ಬೈಲ್, ಸಮಾಜ ಸೇವಕಿ, ಪ್ರಭಾ ನಾರಾಯಣ ಸುವರ್ಣ ಸಮಾಜ ಸೇವಕಿ ಮುಂಬೈ ಆಯ್ಕೆಯಾಗಿದ್ದಾರೆ. ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ(ರಿ) ಬಾಳ್ತಿಲ ಮತ್ತು ಜವಾಹರ್ ಬಾಲ್ ಮಂಚ್ ದ.ಕ ವತಿಯಿಂದ ಕಳೆದ ವರ್ಷ ನಡೆದ ಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯ ಮಟ್ಟದಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ರಾಜಸ್ಥಾನದಲ್ಲಿ ಸ್ಪರ್ಧಿಸಿದ 5 ಬಾಲ ಪ್ರತಿಭೆಗಳಿಗೆ ಜವಾಹರ್ ಬಾಲ್ ಮಂಚ್ ವತಿಯಿಂದ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಅನೀಶ್ ಪೂಜಾರಿ, ಧನಲಕ್ಷ್ಮೀ, ವೈಷ್ಣವಿ ಶೆಟ್ಟಿ, ಶಾನಿ ಪೂಜಾರಿ, ಯಶಸ್ಸಿನಿ ಈ ಪ್ರತಿಭೆಗಳು ಎಂದವರು ಮಾಹಿತಿ ನೀಡಿದರು. ಬೆಳಿಗ್ಗೆ 6 ಗಂಟೆಗೆ ಸಾರ್ವಜನಿಕ ಸತ್ಯನಾರಾಯಣ ಪೂಜೆಯು ನಡೆಯಲಿದೆ ಎಂದರು.
ಸಂಸ್ಥೆಯ ಟ್ರಸ್ಟಿ ಡಾ. ರಾಜೇಶ್ ಪೂಜಾರಿ, ಸದಸ್ಯೆಯರಾದ ಸುಜಾತ ದಿನೇಶ್, ಸರೋಜಿನಿ ಮಾರಪ್ಪ ಪೂಜಾರಿ,ಸುಲತಾ ಉಪಸ್ಥಿತರಿದ್ದರು


Be the first to comment on "ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನ ಸಂಸ್ಥೆ ಮತ್ತು ಜವಾಹರ್ ಬಾಲ್ ಮಂಚ್ ದ.ಕ. ಸಂಯುಕ್ತ ಆಶ್ರಯದಲ್ಲಿ ಫೆ.3ರಂದು ಮಹಿಳಾ ಮತ್ತು ಮಕ್ಕಳ ಸಂಭ್ರಮೋತ್ಸವ"