
ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಕಶೆಕೋಡಿ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಜಾತ್ರಾ ಮಹೋತ್ಸವ ಮತ್ತು ಬ್ರಹ್ಮರಥೋತ್ಸವ ಕಾರ್ಯಕ್ರಮಗಳು ಫೆ.3ರಿಂದ 7ವರೆಗೆ ನಡೆಯಲಿದೆ.
ಆಡಳಿತ ಮೊಕ್ತೇಸರ ಸುಧಾಕರ ಶೆಣೈ ಮರೋಳಿ ಶುಕ್ರವಾರ ಸಂಜೆ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪ್ರತಿ ದಿನವೂ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದು, 6ರಂದು ಸಂಜೆ ಸುಡುಮದ್ದು ಪ್ರದರ್ಶನದೊಂದಿಗೆ ಬ್ರಹ್ಮರಥೋತ್ಸವ ನಡೆಯಲಿದೆ. ಕ್ಷೇತ್ರವು ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮುದಾಯದ ಭಕ್ತಿಯ ಆರಾಧ್ಯ ಕೇಂದ್ರವಾಗಿದ್ದು, 1990ರಲ್ಲಿ ನೂತನವಾಗಿ ನಿರ್ಮಾಣಗೊಂಡ ಗರ್ಭಗುಡಿಯಲ್ಲಿ ಬ್ರಹ್ಮಕಲಶೋತ್ಸವ, 1997ರಲ್ಲಿ ಗಣಪತಿ ಪ್ರತಿಷ್ಠೆ, ನೂತನ ಕಲ್ಯಾಣ ಮಂಟಪದ ಕೆಲಸಗಳು, 2004ನೇ ಇಸವಿಯಲ್ಲಿ ಶಿಲಾಮಯ ವೆಂಕಟರಮಣ ಮೂರ್ತಿಯ ಪ್ರತಿಷ್ಠೆ, 2018ರಲ್ಲಿ ಕ್ಷೇತ್ರಕ್ಕೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ನಡೆಸಲಾಯಿತು. 2023ರಲ್ಲಿ ಸಂಕಲ್ಪಗೊಂಡು 2025ರಲ್ಲಿ 75 ಲಕ್ಷ ರೂ ವೆಚ್ಚದಲ್ಲಿ ಬ್ರಹ್ಮರಥ ಸಮರ್ಪಣೆಯೂ ಆಗಿದ್ದು, ಕಳೆದ ಫೆ.6ರಂದು ಸಾವಿರಾರು ಭಕ್ತರ ಸಮ್ಮುಖ ವಿಜೃಂಭಣೆಯಿಂದ ಬ್ರಹ್ಮರಥೋತ್ಸವ ನಡೆದಿತ್ತು ಎಂದವರು ಮಾಹಿತಿ ನೀಡಿದರು.
ಈ ಸಂದರ್ಭ ಆನುವಂಶಿಕ ಮೊಕ್ತೇಸರ ವೆಂಕಟ್ರಾಯ ಶೆಣೈ ಕಂಟಿಕ, ಮೊಕ್ತೇಸರರಾದ ಶಾಂತಾರಾಮ ಶೆಣೈ ಕಂಟಿಕ, ಡಾ. ವಿಜಯಲಕ್ಷ್ಮೀ ಡಿ. ನಾಯಕ್ ನೇರಳಕೋಡಿ, ರಾಜೀವ ಡಿ.ಎಸ್. ದರ್ಬೆ ಉಪಸ್ಥಿತರಿದ್ದರು.


Be the first to comment on "ಕಶೆಕೋಡಿ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಜಾತ್ರಾ ಮಹೋತ್ಸವ, ಬ್ರಹ್ಮರಥೋತ್ಸವ – ಫೆ.3ರಿಂದ 7ವರೆಗೆ — Details"