
ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ಬಂಟ್ವಾಳ ವಲಯದ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಹಾಗು ರಜತ ಸಂಭ್ರಮದ ಸಮಾರೋಪ ಸಮಾರಂಭ ಬಿ.ಸಿ. ರೋಡ್ ನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ಉದ್ಘಾಟನೆಯನ್ನು ಅಭಿಮತ ಟಿವಿ ಪಾಲುದಾರರಾದ ಡಾ. ಮಮತಾ ಪಿ ಶೆಟ್ಟಿ ನೆರವೇರಿಸಿದರು. ಎಸ್ ಕೆಪಿಎ ಜಿಲ್ಲಾಧ್ಯಕ್ಷ ನವೀನ್ ರೈ ಪಂಜಲ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಉಮೇಶ್ ಕುಮಾರ್ ವೈ., ಜೇಸಿಐ ಬಂಟ್ವಾಳ ಅಧ್ಯಕ್ಷ ಕಿಶೋರ್ ಕುಮಾರ್, ೆಸ್ ಕೆ ಪಿ ಎ ಸಂಚಾಲಕ ಗೋಪಾಲ್ ಸುಳ್ಯ, ಎಸ್ ಕೆ ಪಿ ವಿವಿಧೋದ್ದೇಶ ಸಹಕಾರಿ ಸಂಘ ಅಧ್ಯಕ್ಷ ವಾಸುದೇವ ರಾವ್, ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷ ಆನಂದ್ ಎನ್. ಜಿಲ್ಲಾ ಪ್ರದಾನ ಕಾರ್ಯದರ್ಶಿ ಅಜಯ್ ಮಂಗಳೂರು, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಹರೀಶ್ ಕುಂದರ್, ಜಿಲ್ಲಾ ಉಪಾಧ್ಯಕ್ಷ ದೇವರಾಜ್ ಶೆಟ್ಟಿ ಸುರತ್ಕಲ್, ದತ್ತಾತ್ರೇಯ ಕಾರ್ಕಳ, ವಲಯದ ನೂತನ ಅಧ್ಯಕ್ಷ ರಾಜೇಂದ್ರ ಕೆ. ಗೌ ರವಾಧ್ಯಕ್ಷ ಕಿಶೋರ್ ಕುಮಾರ್, ಪ್ರದಾನ ಕಾರ್ಯದರ್ಶಿ ರವಿ ಕಲ್ಪನೆ, ಕೋಶಾಧಿಕಾರಿ ಕೃಷ್ಣ ರಾಜ್ ರಾವ್ ಉಪಸ್ಥಿತರಿದ್ದರು.
ಆನಂದ್ ಎನ್ ಪ್ರಾಸ್ತವಿಕದೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ರವಿ ಕಲ್ಪನೆ ವಂದಿಸಿದರು. ಎಚ್. ಕೆ. ನಯನಾಡ್ ಹಾಗು ದಯಾನಂದ್ ಬಂಟ್ವಾಳ್ ಕಾರ್ಯಕ್ರಮ ನಿರೂಪಿಸಿದರು.


Be the first to comment on "ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಬಂಟ್ವಾಳ ಘಟಕ ಪದಪ್ರದಾನ ಕಾರ್ಯಕ್ರಮ"