ಆಧ್ಯಾತ್ಮಿಕ ಬೆಳಕಿನಿಂದ ಮಾತ್ರ ರಾಷ್ಟ್ರ ಬೆಳಗಲು ಸಾಧ್ಯ . ಧರ್ಮದ ಬಗ್ಗೆ ಮನೆಯಿಂದ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಈ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಲಿ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ಹೇಳಿದರು
ಅವರು ಒಡಿಯೂರು ರಥೋತ್ಸವ ಪ್ರಯುಕ್ತ ಜ.28ರಂದು ಆಯೋಜಿಸಲಾಗಿದ್ದ ಧರ್ಮಸಭೆಯಲ್ಲಿ ಅನುಗ್ರಹ ಸಂದೇಶ ನೀಡಿದರು.
ಜೀವನರಥ ಎಳೆಯುವುದು ಸುಲಭವಲ್ಲ ಅದಕ್ಕೆ ದೈವೀಕೃಪೆ ಬೇಕು. ಆರಾಧನೆ ಮೂಲಕ ಜೀವನದಲ್ಲಿ ನೆಮ್ಮದಿ ಮತ್ತು ಸಂತೃಪ್ತಿ ಕಾಣಲು ಸಾಧ್ಯಎಂದು ಸ್ವಾಮೀಜಿ ತಿಳಿಸಿದರು.

ಸಾಧ್ವಿ ಶ್ರೀ ಮಾತಾನಂದಮಯೀ ಆಶೀರ್ವಚನ ನೀಡಿ ಆರಾಧನೆ ಮಾಡಿ ದೇವ ಋಣ ಸೇವೇ ಮಾಡಿ ಋಷಿ ಋಣ , ಪಿತೃ ಋಣ ಸಂದಾಯ ಮಾಡಿ ಋಣ ತ್ರಯ ಪೂರೈಸಿದಾಗ ಜೀವನ ಸಾರ್ಥಕ ಎಂದು ಹೇಳಿದರು. ಈ ಸಂದರ್ಭ ಅವರು ದೇವರ ನಾಮ ಸಂಕೀರ್ತನೆ ಹಾಡಿದರು.
ಒಡೆಯನ ಊರು ಒಡಿಯೂರು ಎಂಬಂತೆ ದೀನರ ಕಣ್ಣೀರು ಒರೆಸಿ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಒಡಿಯೂರು ಸ್ವಾಮೀಜಿ ಮಾಡಿದ್ದಾರೆ. ಈ ಕ್ಷೇತ್ರ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ಗುರುಗಳ ಸೇವೆ ಮೂಲಕ ಸಮಾಜ ಸೇವೆಯಲ್ಲಿ ಕೈಜೋಡಿಸೋಣ ಎಂದು ಆಶೀರ್ವಚನ ನೀಡಿದ ಮಾಣಿಲ ಶ್ರೀಧಾಮ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದ ಯೋಗಿಕೌಸ್ತುಭ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಇಲ್ಲಿ ಭಕ್ತಿ ಸಮರ್ಪಣೆಯ ಬ್ರಹ್ಮಕಲಶ ಆಗಿದೆ. ಇಲ್ಲಿಯ ಮಾದರಿ ರಥೋತ್ಸವ ಇದು ನಮ್ಮೆಲ್ಲರಿಗೆ ಪ್ರೇರಣೆ ನೀಡಲಿ
ಎಂದರು. ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಉದ್ಯಮಿಗಳಾದ ಡಾ. ಪಿ.ವಿ. ಶೆಟ್ಟಿ, ಶಶಿಧರ ಬಿ. ಶೆಟ್ಟಿ ಬರೋಡ, ರಾಜೇಶ್ ಶೆಟ್ಟಿ, ರವಿನಾಥ ವಿ. ಶೆಟ್ಟಿ ಅಂಕಲೇಶ್ವರ, ವೈದ್ಯ ಸಾಹಿತಿ ಡಾ. ಮುರಲೀಮೋಹನ ಚೂಂತಾರು , ಎರ್ಮಾಳು ಬಡಾ ವಿದ್ಯಾ ಪ್ರಭೋಧಿನಿ ಪ್ರೌಢಶಾಲೆ ಮತ್ತು ಜ್ಯೂನಿಯರ್ ಕಾಲೇಜಿನ ಅಧ್ಯಕ್ಷರೂ ಆಗಿರುವ ನವಿಮುಂಬೈ ನಗರಪಾಲಿಕೆ ಸದಸ್ಯ ಸುರೇಶ್ ಜಿ. ಶೆಟ್ಟಿ, ಅಂತಾರ್ರಾಷ್ಟ್ರೀಯ ತುಳುವ ಮಹಾಸಭೆ, ಮುಂಬೈನ ಪ್ರಧಾನ ಸಂಚಾಲಕ ಮೋರ್ಲ ರತ್ನಾಕರ ಶೆಟ್ಟಿ,ರವಿನಾಥ್ ವಿ.ಶೆಟ್ಟಿ ಅಂಕಲೇಶ್ವರ, ಕೊಲ್ಲಂನ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಜಿತ್‌ಕುಮಾರ್ ಪಂದಳಮ್, ಪಟ್ಲ ಯಕ್ಷಧ್ರುವ ಫೌಂಡೇಶನ್ ನ ಸ್ಥಾಪಕ ಪಟ್ಲ ಸತೀಶ್ ಶೆಟ್ಟಿ ವಿಶೇಷ ಆಹ್ವಾನಿತರಾಗಿದ್ದರು.
ಆರೋಗ್ಯ, ಶಿಕ್ಷಣ, ಮನೆ ನಿರ್ಮಾ, ಗೋಶಾಲೆಗಳು, ಭಜನಾ ಮಂಡಳಿಗಳು, ಶಾಲೆಗಳು ,ರುದ್ರಭೂಮಿ ಒಳಗೊಂಡಂತೆ 135 ಮಂದಿಗೆ 12,77,000 ಕ್ಕೂ ಅಧಿಕ ನೆರವು ವಿತರಿಸಲಾಯಿತು. ಪ್ರಾಯೋಜಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಮುಖ್ಯಶಿಕ್ಷಕಿ ರೇಣುಕಾ ಎಸ್. ರೈ ಆಶಯಗೀತೆ ಹಾಡಿದರು. ಪ್ರಕಾಶ ಕೆ. ಶೆಟ್ಟಿ ಪೇಟೆಮನೆ ಸ್ವಾಗತಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾತೇಶ್ ಭಂಡಾರಿ ವಂದಿಸಿದರು. ರಥೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು ಸಭಾ ಕಾರ್ಯಕ್ರಮದ ಮೊದಲು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ದತ್ತಾಂಜನೇಯ ದೇವರಿಗೆ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ವೇದಮೂರ್ತಿ ಚಂದ್ರಶೇಖರ ಉಪಾಧ್ಯಾಯ ಅವರ ಪೌರೋಹಿತ್ಯದಲ್ಲಿ ಬ್ರಹ್ಮಕಲಶಾಭಿಷೇಕ ಜರಗಿತು . ಬಳಿಕ ಸ್ವಯಂಭೂ ನಾಗರಾಜ ಸನ್ನಿಧಿಯಲ್ಲಿ ನಾಗತಂಬಿಲ. ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಸಭಾ ಕಾರ್ಯಕ್ರಮದ ಅನಂತರ ಆಗಮ ಪೆರ್ಲ ಮತ್ತು ಬಳಗದವರಿಂದ ಶಾಸ್ತ್ರೀಯ ಸಂಗೀತ ನಡೆಯಿತು


Be the first to comment on "ಆಧ್ಯಾತ್ಮಿಕ ಬೆಳಕಿನಿಂದ ಮಾತ್ರ ರಾಷ್ಟ್ರ ಬೆಳಗಲು ಸಾಧ್ಯ: ಶ್ರೀ ಗುರುದೇವಾನಂದ ಸ್ವಾಮೀಜಿ"